Roberrt : ತೆಲುಗಿನಲ್ಲಿ ಸೋತ ಕನ್ನಡತಿ..!! ‘ರಾಬರ್ಟ್’ ಬೆಡಗಿ ತೆಲುಗು ಸಿನಿಮಾದ ಬಾಕ್ಸ್ ಆಫೀಸ್ ರೆಸ್ಪಾನ್ಸ್..!!
ಕನ್ನಡದಲ್ಲಿ ಸೂಪರ್ ಹಿಟ್ ರಾಬರ್ಟ್ ಸಿನಿಮಾದಲ್ಲಿ ಡಿ ಬಾಸ್ ಗೆ ನಾಯಕಿಯಾಗಿ ಮಿಂಚಿದ್ದ ನಟಿ ಆಶಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ವ್ಟೀವ್.. ಸದ್ಯ ತೆಲುಗಿ ಇಂಡಸ್ಟ್ರಿಗೆ ಹಾರಿದ್ದ ಆಶಾ ನಟಿಸಿದ ತೆಲುಗಿನ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಜೆಟ್ ಹಣ ಗಳಿಕೆ ಮಾಡುವಲ್ಲಿ ಸೋತಿದೆ..
ಹೌದು, ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಓ ಮೈ ಕಡವುಲೆ ತೆಲುಗು ರಿಮೇಕ್ ಆದ ಓರಿ ದೇವುಡ ಚಿತ್ರದಲ್ಲಿ ಆಶಾ ಭಟ್ ಅಭಿನಯಿಸಿದ್ದಾರೆ.
ಈ ಚಿತ್ರದಲ್ಲಿ ಹಿರಿಯ ನಟ ವಿಕ್ಟರಿ ವೆಂಕಟೇಶ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ವಿಶ್ವಕ್ ಸೇನ್ ನಾಯಕನಾಗಿ ಮತ್ತು ಮಿಥಿಲಾ ಪಾಲ್ಕರ್ ಆಶಾ ಭಟ್ ಜತೆ ಮತ್ತೋರ್ವ ನಾಯಕಿಯಾಗಿ ಬಣ್ಣ ಹಚ್ಚಿದ್ದರು.
ಕಳೆದ ಅಕ್ಟೋಬರ್ 21ರಂದು ಬಿಡುಗಡೆಗೊಂಡ ಈ ಚಿತ್ರ ವೀಕ್ಷಿಸಿದ ಸಿನಿಪ್ರಿಯರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದರು.
ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಬಜೆಟ್ ನಷ್ಟೂ ದುಡ್ಡನ್ನ ಗಳಿಸುವಲ್ಲಿ ವಿಫಲವಾಗಿದೆ.. ಸಿನಿಮಾ 9.54 ಕೋಟಿ ಕಲೆಕ್ಷನ್ ಮಾಡಿದೆ..
ಚಿತ್ರ ಸುಮಾರು 10 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು ಬಾಕ್ಸ್ ಆಫೀಸ್ ಮೂಲಕ ತನ್ನ ಬಜೆಟ್ ಮರಳಿ ಪಡೆಯುವಲ್ಲಿ ವಿಫಲವಾಗಿದೆ..
ಇನ್ನು ಎಂದು ತಿಳಿಸಲಾಗಿದೆ. ಆದರೆ ಆಡಿಯೋ, ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕುಗಳಿಂದ ಒರಿ ದೇವುಡ ಲಾಭ ಗಳಿಸಿದೆ ಎನ್ನಬಹುದು..