Siddhanth v suryavamshi : ಜಿಮ್ ನಲ್ಲಿ ಕುಸಿದು ಕಿರುತೆರೆ ನಟ ನಿಧನ
ಜನಪ್ರಿಯ ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಜಿಮ್ನಲ್ಲಿ ವರ್ಕೌಟ್ ಮಾಡುವಾಗ 46 ವರ್ಷದ ನಟ ಹೃದಯಾಘಾತದಿಂದ ನಿಧರಾಗಿದ್ದಾರೆ.
ಸಿದ್ಧಾಂತ್ ವರ್ಕೌಟ್ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದ ನಂತರ ಆತನ ಕೋಚ್ ಆಂಬುಲೆನ್ಸ್ ಗೆ ಕರೆ ಮಾಡಿ ಅವರನ್ನ ಮುಂಬೈ ನ ಕೋಕಿಲಾ ಬೆನ್ ಆಸ್ಪತ್ರಗೆ ಸೇರಿಸಿದ್ದಾರೆ. 12:31 ಕ್ಕೆ ನಟ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ನಟನ ನಿಧನಕ್ಕೆ ಕಿರುತೆರೆ ಹಾಗೂ ಹಿರಿತೆರೆಯ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದ ಅನೇಕರು ಅಕಾಲಿಕ ಮರಣ ಹೊಂದುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ನಟ ಸಿದ್ದಾಂತ್ ಕುಸುಮ್, ಕಸೌತಿ ಜಿಂದಗಿ ಕೇ, ಕೃಷ್ಣ-ಅರ್ಜುನ್, ಜಮೀನ್ ಸೇ ಆಸಂ ತಕ್, ಕ್ಯಾ ದಿಲ್ ಮೇ ಹೈ, ಗೃಹಸ್ತಿ ಮುಂತಾದ ಧಾರವಾಹಿಗಳ ಮೂಲಕ ಮನೆಮಾತಾಗಿದ್ದರು. ಜಿದ್ದಿ ದಿಲ್ ಮನೆ ನಾ ಕೊನೆಯದಾಗಿ ಕಾಣಸಿಕೊಂಡ ಕಾರ್ಯಕ್ರಮವಾಗಿದೆ.
ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲೇಸಿಯಾ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪತಿಯ ಅಕಾಲಿಕ ಮರಣ ಸುದ್ದಿ ಅವರಿಗೆ ಶಾಕ್ ನೀಡಿದೆ. ಅಲೇಸಿಯಾ ರಷ್ಯಾ ಮೂಲದವರು. ಅವರಿಗೆ ಇದು ಎರಡನೇ ಮದುವೆ ಆಗಿತ್ತು. 2017ರಲ್ಲಿ ಅಲೇಸಿಯಾ ಹಾಗೂ ಸಿದ್ಧಾಂತ್ ಮದುವೆ ಆದರು. 2000-2015ರವರೆಗೆ ಇರಾ ಎಂಬುವವರ ಜತೆ ಸಿದ್ಧಾಂತ್ ಸಂಸಾರ ನಡೆಸಿದ್ದರು.