ಮಹಿಳಾ ಪ್ರಧಾನ ಸಿನಿಮಾಗಳತ್ತ , ಅದ್ರಲ್ಲೂ ಸಾಹಸಮಯ ಚಿತ್ರಗಳಿಗೆ ಲವು ತೋರಿಸುತ್ತಿದ್ದಾರೆ ನಟಿಯರು.. ಅದ್ರಲ್ಲೂ ಸಮಂತಾ ನಟನೆಯ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ , ಸೆರೋಗೆಸಿ ಹಗರಣದ ಕುರಿತಾದ ಪ್ಯಾನ್ ಇಂಡಿಯಾ ಸಿನಿಮಾ ಯಶೋಧ ಇಂದು ( ನವೆಂಬರ್ 11 ) ದೇಶ ಹಾಗೂ ವಿಒಶ್ವಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಿದೆ..
ಸೋಷಿಯಲ್ ಮೀಡಿಯಾದಲ್ಲಿ ಮೊದಲನೇ ದಿನ ಮೊದಲ ಶೋ ನೋಡಿದವರಿಂದ ಒಳ್ಳೆಯ ವಿಮರ್ಶೆಗಳು ಸಿಗುತ್ತದೆ.. ಸಿನಿಮಾ ರಹಸ್ಯಮಯವಾಗಿದ್ದು , ಆಕ್ಷನ್ ಥ್ರಿಲ್ಲರ್ ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ..
ಉನ್ನಿ ಮುಕುಂದನ್ ಮತ್ತು ವರಲಕ್ಷ್ಮಿ ಶರತ್ ಕುಮಾರ್ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಿದ್ದಾರೆ.. ಅದ್ರಲ್ಲೂ ವರಲಕ್ಷ್ಮಿ ಪಾತ್ರಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾ ಒಟ್ಟಾರೆಯಾಗಿ ಥ್ರಿಲ್ಲಿಂಗ್ ಆಗಿದ್ದು , ಒಳ್ಳೆಯ ವಿಮರ್ಶೆಗಳನ್ನ ಪಡೆತಯುತ್ತಾ ಮುಂದೆ ಸಾಗಿದೆ.. ಮೊದಲನೇ ದಿನದ ಕಲೆಕ್ಷನ್ ನಂತರ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ..