Allu Arjun : ಕೇರಳದ ನರ್ಸಿಂಗ್ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾದ ‘ಪುಷ್ಪರಾಜ್’
ಪುಷ್ಪ ಮೂಲಕ ಪ್ಯಾನ್ ಇಂಡಿಯನ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಗೆ ದೇಶದ ಮೂಲೆ ಮೂಲೆಯಲ್ಲೂ ಕ್ರೇಜ್ ಇದೆ.. ಅಭಿಮಾನಿಗಳಿದ್ದಾರೆ.. ಪುಯಷ್ಪರಾಜನ ಅಂದಾಜ್ ಗೆ ಫಿದಾ ಆಗಿದ್ದಾರೆ..
ಅಂದ್ಹಾಗೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಇದೀಗ ಸಿನಿಮಾ ಹೊರತಾಗಿ ಸಖತ್ ಸುದ್ದಿಯಲ್ಲಿದ್ದಾರೆ.. ಒಂದೊಳ್ಳೆ ಕೆಲಸ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.. ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ..
ಕೇರಳದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರ ಶಿಕ್ಷಣಕ್ಕೆ ನೆರವಾಗಿದ್ದಾರೆ ಪುಷ್ಪ ಸ್ಟಾರ್..
ಕೇರಳದ ವಿದ್ಯಾರ್ಥಿನಿ ನರ್ಸಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು.. ಈ ವಿದ್ಯಾರ್ಥಿನಿಗೆ ಅಲ್ಲು ಅರ್ಜುನ್ ನಾಲ್ಕು ವರ್ಷದ ಶಿಕ್ಷಣದ ಸಂಪೂರ್ಣ ಖರ್ಚನ್ನು ಭರಿಸಲು ಮುಂದಾಗಿದ್ದಾರೆ..
ಕೇರಳದ ಅಲಪ್ಪುಳ ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಲ್ಲು ಅರ್ಜುನ್ ಅವರ ಒಳ್ಳೆ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕೇರಳದ ಮುಸ್ಲಿಂ ವಿದ್ಯಾರ್ಥಿನಿ ತಮ್ಮ ಬಳಿ ಸಹಾಯ ಕೇಳಿ ಬಂದಿದ್ದ ಘಳಿಗೆಯನ್ನು ವಿವರಿಸಿದ್ದಾರೆ. ಮುಸ್ಲಿಂ ಹುಡುಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಹಾಯ ಕೋರಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದರು.
ಪಿಯುಸಿಯಲ್ಲಿ ಶೇ.92ರಷ್ಟು ಅಂಕಪಡೆದಿದ್ದರೂ, ಆರ್ಥಿಕವಾಗಿ ಸಬಲರಾಗಿಲ್ಲದೆ ಇರೋದ್ರಿಂದ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಆಕೆಯ ತಂದೆ ಕಳೆದ ವರ್ಷ ಕೊರೊನಾ ಕಾರಣದಿಂದ ಮೃತಪಟ್ಟಿದ್ದರು.
ನಾನು ಆಕೆಯ ಕಣ್ಣುಗಳಲ್ಲಿ ಆತ್ಮಸ್ಥೈರ್ಯ ಹಾಗೂ ಭರವಸೆಯನ್ನು ಕಂಡೆ. ಹೀಗಾಗಿ ನಾವು ಅಲ್ಲೆಪ್ಪಿ ಯೋಜನೆಯ ಭಾಗವಾಗಿ ಆಕೆಗೆ ಎಲ್ಲಾ ರೀತಿಯ ನೆರವು ನೀಡಲು ನಿರ್ಧರಿಸಿದ್ದೆವು ಎಂದು ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ಹೇಳಿದ್ದಾರೆ.
ಬಳಿಕ ಹಲವು ಸಹೋದ್ಯೋಗಿಗಳನ್ನು ಸಂಪರ್ಕ ಮಾಡಿದ್ದು , ಈ ವೇಳೆ ಖಾಸಗಿ ಕಾಲೇಜಿನಲ್ಲಿ ಅವರಿಗೆ ಸೀಟ್ ಸಿಕ್ಕಿತ್ತು. ಆದರೆ, ನಾಲ್ಕು ವರ್ಷ ಶಿಕ್ಷಣವನ್ನು ಮುಗಿಸಲು ಪ್ರಾಯೋಜಕರನ್ನು ಹುಡುಕಬೇಕಿತ್ತು.
ಆಗ ಕೇರಳದ ಅಲಪ್ಪುಳ ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ಅವರು ಅಲ್ಲು ಅರ್ಜುನ್ ಗೆ ಕರೆ ಮಾಡಿದ್ದರು. ಅಲ್ಲು ಅರ್ಜುನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅವರು ಕೂಡಲೇ ಸ್ಪಂದಿಸಿದ್ರು. ಒಂದು ವರ್ಷಕ್ಕೆ ನೀಡುವ ನೆರವನ್ನು ನಾಲ್ಕು ವರ್ಷಕ್ಕೆ ನೀಡಿದ್ರು. ಹಾಸ್ಟೆಲ್ ಫೀಸ್ ನಿಂದ ಹಿಡಿದು, ಶಿಕ್ಷಣಕ್ಕೆ ಬೇಕಾಗಿರೋ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡರು ಎಂದು ಹೇಳಿ ಅಲ್ಲು ಅರ್ಜುನ್ ಗೆ ಧನ್ಯವಾದ ಅರ್ಪಿಸಿದ್ದಾರೆ..