BBK9 : ‘ನೀವು ನನ್ನ ತಂದೆಯಾಗೋದಕ್ಕೆ ಯಾವತ್ತೂ ಸಾಧ್ಯವೇ ಇಲ್ಲ’..!! ಆರ್ಯವರ್ಧನ್ ಗುರೂಜಿಗೆ ಹೇಗೆ ಹೇಳಿದ್ಯಾಕೆ..?? ದಿವ್ಯಾ ಉರುಡುಗ..!!
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದು ಟಿವಿ ಸೀಸನ್ ಗೂ ಪ್ರವೇಶಿಸಿ ಎಲ್ಲಿಯೂ ಹೈಲೇಟ್ ಆಗುತ್ತಿರುವ ರ್ಯವರ್ಧನ್ ಗುರೂಜಿ ಕೆಲ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.. ಒಂದು ಬಾರಿ ಕ್ಯಾಪ್ಟನ್ ಸಹ ಆಗಿದ್ದರು..
ತಮ್ಮ ಆಟ ಆಡಲು ಇತರರ ಜೊತೆಗೆ ಚನಾಗಿರುವಂತಹ ಬುದ್ದಿ ಗುರೂಜಿಯದ್ದು ಅನ್ನೋದು ಮನೆಯ ಬಹುತೇಕ ಸ್ಪರ್ಧಿಗಳ ಅಭಿಪ್ರಾಯ..
ಅಂದ್ಹಾಗೆ ಸೀಸನ್ 8 ರಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆಗಿ ಫೈನಲ್ಸ್ ತಲುಪಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ದಿವ್ಯಾ ಉರುಡುಗ ೀ ಸೀಸನ್ ನಲ್ಲೂ ಇದ್ದಾರೆ ಆದ್ರೆ ಮಂಕಾಗಿಬಿಟ್ಟಿದ್ದರು.. ಇದೀಗ ಮತ್ತೆ ದಿವ್ಯಾ ಫಾರ್ಮ್ ಗೆ ಬಂದಿದ್ದಾರೆ..
ಆದ್ರೆ ಅದ್ಯಾಕೋ ದಿವ್ಯಾಗೆ ಆರ್ಯವರ್ಧನ್ ಗುರೂಜಿ ಮೇಲೆ ಬಹಳ ಬೇಸರ ಬಂದಿದೆ.. ಅಲದ್ದೇ ನೀವ್ಯಾವತ್ತೂ ನನ್ನ ತಂದೆಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ..
ಹೌದು..!
ಗುರೂಜಿಗೆ ಜೋಕರ್ ರೀತಿಯಲ್ಲಿ ದಿವ್ಯಾ ಬಣ್ಣ ಹಚ್ಚುತ್ತಾ , ತಂದೆ ಮಗಳ ಸಂಬಂಧದ ಬಗ್ಗೆ ತಿಳಿಸಿ ಹೇಳಿದ್ದಾರೆ. ನಿಮ್ಮನ್ನ ಅಪ್ಪನ ಥರ ನೋಡಿದ್ರೆ, ಅಪ್ಪ ಅಂತ ಒಪ್ಪಿಕೊಂಡರೆ, ಏನನ್ನು ಹೇಳುವುದಕ್ಕೆ ಆಗಲ್ಲ. ನಿಮ್ಮ ಮಗಳ ಸ್ಥಾನದಲ್ಲಿ ನಾನಿರೋದಕ್ಕೆ ಆಗಲ್ಲ. ನಮ್ಮ ಅಪ್ಪನ ಸ್ಥಾನ ನೀವೂ ತುಂಬೋದಕ್ಕೆ ಆಗಲ್ಲ. ನಮ್ಮ ಅಪ್ಪ ಆಗಿದ್ರೆ, ಆ ರೀತಿ ನನ್ನನ್ನು ಹೊರಗೆ ಕಳುಹಿಸುತ್ತಾರಾ ಹೇಳಿ ಅಂತ ಹೇಳಿದ್ದಾರೆ..