BBK9 : ದಿವ್ಯಾ ಉರುಡುಗ ಬ್ಯಾಕ್ ಟು ಫಾರ್ಮ್ ಎಂದ ಫ್ಯಾನ್ಸ್..!!
ಸೀಸನ್ 8 ರಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆಗಿ ಫೈನಲ್ಸ್ ತಲುಪಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ದಿವ್ಯಾ ಉರುಡುಗ ೀ ಸೀಸನ್ ನಲ್ಲೂ ಇದ್ದಾರೆ ಆದ್ರೆ ಮಂಕಾಗಿಬಿಟ್ಟಿದ್ದರು.. ಇದೀಗ ಮತ್ತೆ ದಿವ್ಯಾ ಫಾರ್ಮ್ ಗೆ ಬಂದಿದ್ದಾರೆ..
ರೂಪೇಶ್ ರಾಜಣ್ಣ ಅವರು ತಮ್ಮನ್ನ ಫೇಕ್ ಎಂದಾಗ ಗಳಗಳನೆ ಅತ್ತಿದ್ದರು.. ನಂತರ ಆರ್ಯವರ್ಧನ್ ಗುರೂಜಿ ಅವರನ್ನ ತಂದೆಯ ಸ್ಥಾನದಲ್ಲಿ ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದರು..
ಒಟ್ನಲ್ಲಿ ಮತ್ತೆ ದಿವ್ಯಾ ಹೈಲೇಟ್ ಆಗ್ತಿದ್ದು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ..
ದಿವ್ಯಾ ಉರುಡುಗ ಅವರು ಮನೆಯಲ್ಲಿರುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಮತ್ತು ನಾಮನಿರ್ದೇಶನ ಕಾರ್ಯಗಳಲ್ಲಿ ರೂಪೇಶ್ ರಾಜಣ್ಣ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ರೂಪೇಶ್ ರಾಜಣ್ಣ ಅವರಿಗೆ ದಿವ್ಯಾ ಉರುಡುಗ ಅವರ ಬ್ಯಾಕ್-ಟು-ಬ್ಯಾಕ್ ಪ್ರತ್ಯುತ್ತರಗಳನ್ನು ಫ್ಯಾನ್ಸ್ ಎಂಜಾಯ್ ಮಾಡ್ತಿದ್ದಾರೆ..
ದಿವ್ಯಾ ಅಭಿಮಾನಿಗಳು ಆಕೆಯನ್ನು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ದಿವ್ಯಾ ಯು ಮತ್ತೆ ಫಾರ್ಮ್‌ಗೆ ಮರಳಿದ್ದಾರೆ ಮತ್ತು ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.