BBK9 : ರೂಪೇಶ್ ರಾಜಣ್ಣಗೆ ಕಳಪೆ ಪಟ್ಟ ಕೊಟ್ಟ ಸ್ಪರ್ಧಿಗಳು..!!
ಬಿಗ್ ಬಾಸ್ ಕನ್ನಡ 9 ಪ್ರತಿ ನಾಮನಿರ್ದೇಶನ ಕಾರ್ಯದ ನಂತರ ಸ್ಪರ್ಧಿಗಳ ನಡುವಿನ ಸಂಬಂಧವು ಬದಲಾಗುವುದರೊಂದಿಗೆ ಮನೆಯಲ್ಲಿ ಪ್ರತಿದಿನ ವಾತಾವರಣವು ಬದಲಾಗುತ್ತಿದೆ.
BBK9 ಕಲರ್ಸ್ ಕನ್ನಡ ವೀಕ್ಷಕರ ಗಮನವನ್ನು ಸೆಳೆಯಲು ನಿರ್ವಹಿಸುತ್ತಿದೆ ಮತ್ತು ವಾರದಿಂದ ವಾರಕ್ಕೆ ಹೊಸ ವೀಕ್ಷಕರನ್ನು ಸೆಳೆಯುತ್ತಿದೆ. ಮನೆಯಲ್ಲಿ ಫೇಕ್ ರಿಯಲ್ ಟಾಸ್ಕ್ ನಿಂದ ಸ್ಪರ್ಧಿಗಳ ನಡುವೆ ಕಿಚ್ಚು ಹೊತ್ತಿದೆ..
ಇಷ್ಟೆಲ್ಲಾ ನಾಟಕಗಳ ನಡುವೆ ರೂಪೇಶ್ ರಾಜಣ್ಣ ತಮ್ಮ ಕಟುವಾದ ಮಾತುಗಳಿಂದ ದಿವ್ಯಾ ಉರುಡುಗರನ್ನು ನೋಯಿಸಿದರು.
ಆಕೆಯನ್ನು ಫೇಕ್ ಎಂದು ಕರೆಯುವ ಮಟ್ಟಕ್ಕೂ ಹೋಗಿದ್ದಾರೆ.
ಆದ್ರೆ ರೂಪೇಶ್ ವಿರುದ್ಧ ಮನೆಯ ಸದಸ್ಯರು ತಿರುಗಿ ಬಿದ್ದಿದ್ದಾರೆ..
ಅಲ್ಲದೇ ಇದೀಗ ರೂಪೇಶ್ ರಾಜಣ್ಣ ಕಳಪೆ ಎಂದು ಅವರಿಗೆ ಕಳಪೆ ಹಣೆ ಪಟ್ಟಿ ನೀಡಿದ್ದಾರೆ..
ಇತ್ತ ಸಾಕಷ್ಟು ಕಸರತ್ತುಗಳ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಸಾಕಷ್ಟು ವಾಗ್ವಾದಗಳ ಬಳಿಕ ಕೊನೆಗೂ ಕಾವ್ಯಶ್ರೀ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ..
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣರಿಗೆ ಕಳಪೆ ಹಣೆ ಪಟ್ಟಿ ನೀಡಲಾಗಿದೆ..
ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನ ಕಳಪೆ ಪಟ್ಟಕ್ಕೆ ಸೂಚಿಸಿದ್ದಾರೆ..
ಕಳಪೆ ಸಿಕ್ಕ ಕಾರಣಕ್ಕಾಗಿ ಜೈಲಿಗೂ ಕಳುಹಿಸಲಾಗಿದೆ. ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ದಿವ್ಯಾ, ದೀಪಿಕಾ ದಾಸ್, ರಾಕೇಶ್ ಅಡಿಗ ಸೇರಿದಂತೆ ಬಹುತೇಕರು ರೂಪೇಶ್ ರಾಜಣ್ಣ ವಿರುದ್ಧವೇ ಮಾತನಾಡಿದ್ದು , ದಿವ್ಯಾ ಉರುಡುಗ ರಾಜಣ್ಣ ವಿರುದ್ಧ ಾರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ..