BBK9 : ಅಬ್ಬಬ್ಬಾ..!! ಏನಿದು ಪವಾಡ..?? ರಾಜಣ್ಣನನ್ನ ಅಪ್ಪಿ ಸಮಾಧಾನ ಮಾಡಿದ ಸಂಬರ್ಗಿ..!!
ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಹಾವು ಮುಂಗಸಿಯ ರೀತಿಯೇ ಕಿತ್ತಾಡುತ್ತಾ ಎಷ್ಟೋ ಬಾರಿ ವಯಕ್ತಿವಾಗಿಯೂ ಬೈದಾಡಿಕೊಂಡಿದ್ದಾರೆ..
ಮಧ್ಯದಲ್ಲಿ ಒಂದೆರೆಡು ದಿನ ಇಬ್ಬರ ನಡುವೆ ಎಲ್ಲವೂ ಸರಿಯಾಗಿತ್ತಾಧ್ರೂ, ಮತ್ತೆ ಕಿತ್ತಾಟ ಶುಇರುವಾಗಿತ್ತು.. ಆದ್ರೀಗ ಅಚ್ಚರಿಯ ಘಟನೆಯೊಂದು ನಡೆದಿದ್ದು ಎಲ್ಲರೂ ಉಬ್ಬೇರಿಸುವಂತೆ ಆಗಿದೆ..
ಮನೆಯಲ್ಲಿ ಫೇಕ್ ರಿಯಲ್ ಟಾಸ್ಕ್ ನಿಂದ ಸ್ಪರ್ಧಿಗಳ ನಡುವೆ ಕಿಚ್ಚು ಹೊತ್ತಿದೆ..
ಇಷ್ಟೆಲ್ಲಾ ನಾಟಕಗಳ ನಡುವೆ ರೂಪೇಶ್ ರಾಜಣ್ಣ ತಮ್ಮ ಕಟುವಾದ ಮಾತುಗಳಿಂದ ದಿವ್ಯಾ ಉರುಡುಗರನ್ನು ನೋಯಿಸಿದರು.
ಆಕೆಯನ್ನು ಫೇಕ್ ಎಂದು ಕರೆಯುವ ಮಟ್ಟಕ್ಕೂ ಹೋಗಿದ್ದಾರೆ.
ಆದ್ರೆ ರೂಪೇಶ್ ವಿರುದ್ಧ ಮನೆಯ ಸದಸ್ಯರು ತಿರುಗಿ ಬಿದ್ದಿದ್ದಾರೆ..
ಅಲ್ಲದೇ ಇದೀಗ ರೂಪೇಶ್ ರಾಜಣ್ಣ ಕಳಪೆ ಎಂದು ಅವರಿಗೆ ಕಳಪೆ ಹಣೆ ಪಟ್ಟಿ ನೀಡಿದ್ದಾರೆ..
ಇತ್ತ ಸಾಕಷ್ಟು ಕಸರತ್ತುಗಳ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಸಾಕಷ್ಟು ವಾಗ್ವಾದಗಳ ಬಳಿಕ ಕೊನೆಗೂ ಕಾವ್ಯಶ್ರೀ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ..
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣರಿಗೆ ಕಳಪೆ ಹಣೆ ಪಟ್ಟಿ ನೀಡಲಾಗಿದೆ..
ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನ ಕಳಪೆ ಪಟ್ಟಕ್ಕೆ ಸೂಚಿಸಿದ್ದಾರೆ..
ಇದ್ರಿಂದಾಗಿ ರೂಪೇಶ್ ರಾಜಣ್ಣ ಸಖತ್ ಆಕ್ರೋಶಗೊಂಡಿದ್ದರು..
ಅಡುಗೆ ಮನೆಯಲ್ಲಿ ಊಟ ಮಾಡದೆ ರೂಪೇಶ್ ರಾಜಣ್ಣ ಹಾಗೆಯೇ ಒಂಟಿಯಾಗಿ ಕೂತಿದ್ದರು. ಅದನ್ನು ನೋಡಿ ಪ್ರಶಾಂತ್ ಸಂಬರಗಿ, ಊಟ ಮಾಡೋದು, ತಲೆ ಕೆಡಿಸಿಕೊಳ್ಳಬೇಡ. ಸುಮ್ನಿರು, ಗಲೀಜು ಮಾಡಬೇಡ. ಇಲ್ಲಿ ಯಾರೂ ನಿನಗೆ ಸಾಂತ್ವನ ಹೇಳಲ್ಲ.
ನಿನ್ನ ಮುಗ್ಧತೆ ನೋಡಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನಾನು ಅವರ ಪರ ಇವರ ಪರ ಅಂತಲ್ಲ. ನಿನ್ನ ನೋವು ನನಗೆ ಅರ್ಥ ಆಗತ್ತೆ, ನಿನ್ನ ನೋವಿಗೆ ನಾನು ಸ್ಪಂದಿಸುವೆ. ಈ ಹ್ಯಾಪ್ ಮೋರೆ ಹಾಕಿಕೊಂಡು ಫೀಲಿಂಗ್ ಅಲ್ಲಿ ಕೂತರೆ ನಮಗೆ ಬೇಜಾರಾಗತ್ತೆ, ಬೇರೆಯವರು ಕುಗ್ಗಿಬಿಟ್ಟ ಅಂತ ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಎದ್ದು ಊಟಮಾಡಿ ಎಂದು ರೂಪೇಶ್ ಶೆಟ್ಟಿ ಮುಖ ಹಿಡಿದುಕೊಂಡು, ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ.
ನಾನು ಮಾತನಾಡೋಕೆ ಹೋಗಲ್ಲ. ನನಗೆ ಇನ್ನೊಂದು ಚಾನ್ಸ್ ಸಿಕ್ಕಿಲ್ಲ ಅಂತ ಸುಮ್ಮನಿದ್ದೇನೆ. ನಾನು ಕುಗ್ಗಲ್ಲ, ನನ್ನ ಕುಗ್ಗಿಸೋಕೆ 100 ಕೆರೆ ನೀರು ಕುಡಿಯಬೇಕು ಎಂದು ಪ್ರಶಾಂತ್ ಸಂಬರಗಿ ಮಾತಿಗೆ ರೂಪೇಶ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಆದ್ರೆ ಇವರಿಬ್ಬರ ನಡುವಿನ ಸನ್ನಿವೇಶ ಮಾತ್ರ ಎಲ್ಲರನ್ನೂ ಅಚ್ಚರಿಗೀಡು ಮಾಡಿರುವುದಂತೂ ಸತ್ಯ..