BBK9 : ವೈಲ್ಡ್ ಕಾರ್ಡ್ ನಲ್ಲಿ ಹೊಸ ಟ್ವಿಸ್ಟ್..!! ಸಾನ್ಯಾ ಕಮ್ ಬ್ಯಾಕ್..!??
ಬಿಗ್ ಬಾಸ್ ಕನ್ನಡ ಇನ್ನೇನು 7 ನೇ ವಾರವೂ ಮುಕ್ತಾಯದ ಹಂತಕ್ಕೆ ತಲುಪಿದೆ… ಇನ್ನೇನು ವೈಲ್ಡ್ ಕಾರ್ಡ್ ಸ್ಪರ್ಧಿಗಳ ೆಂಟ್ರಿಯ ಸಮಯವಿದು..
ಈಗಾಘಲೇ ಐಶ್ವರ್ಯ , ಸೈಕ್ ನವಾಜ್ , ದರ್ಶ್ , ಮಯೂರಿ , ನೇಹಾ , ಸಾನ್ಯಾ ಮನೆಯಿಂದ ಹೊರನಡೆದಿದ್ದು , ಈ ವಾರ ಯಾರು ಮನೆಯಿಂದ ಹೊರನಡೆಯುತ್ತಿದ್ದಾರೆ ಎಂಬ ಚರ್ಚೆಗಳಾಗ್ತಿವೆ..
ಇದೆಲ್ಲದರ ನಡುವೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ನಲ್ಲಿ ಅಚ್ಚರಿಯ ಹೆಸರುಗಳು ಕೇಳಿ ಬರುತ್ತಿವೆ.. ಸಾನ್ಯಾ ಐಯರ್ , ಮತ್ತೊಮ್ಮೆ ವಾಪಸ್ ಮನೆಗೆ ಬರುತ್ತಾರೆ ಎಂಬ ಸುದ್ದಿ ಹರಿದಾಡ್ತಿದೆ,..
ಹೀಗೊಂದು ಅನುಮಾನ ಅಥವ ಪ್ರಶ್ನೆ ಮಾಡಲು ಕಾರಣ ಸಾನ್ಯಾ ಐಯರ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿನ್ನ ಬೇಗ ನೋಡಲು ಕಾಯುತ್ತಿದ್ದೇನೆ ಬೆಸ್ಟ್ ಫ್ರೆಂಡ್ ಎಂದು ಪೋಸ್ಟ್ ಮಾಡಿರೋದು.. ಇದು ಪರೋಕ್ಷವಾಗಿ ರೂಪೇಶ್ ಗಾಗಿ ಹಾಕಿರುವಂತಿದೆ..
ಹೀಗಾಗಿ ಸಾನ್ಯಾ ವಾಪಸ್ ಬರಲಿದ್ದಾರಾ,..?? ಎಂಬ ಪ್ರಶ್ನೆ ಕಾಡುತ್ತಿದೆ..
ಇನ್ನೂ ಇವರ ಹೊರತಾಗಿ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ , ಒಟಿಟಿ ಸ್ಪರ್ಧಿ ಸೋನು ಗೌಡ ಹೆಸರುಗಳು ಚರ್ಚೆಯಾಗ್ತಿವೆ.. ಆದ್ರೆ ಯಾರು ಬಿಗ್ ಬಾಸ್ ಗೆ ಬರುತ್ತಾರೆ ವೈಲ್ಡ್ ಕಾರ್ಡ್ ಮೂಲಕ ಅನ್ನೋದು ಕಾದು ನೋಡಬೇಕಿದೆ..