Naga Shourya : ಬೆಂಗಳೂರಿನ ಹುಡುಗಿ ಜೊತೆಗೆ ಟಾಲಿವುಡ್ ಸ್ಟಾರ್ ಮದುವೆ ಫಿಕ್ಸ್..!!
ತೆಲುಗಿನ ಜನಪ್ರಿಯ ನಟ ನಾಗಶೌರ್ಯ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.. ಬೆಂಗಳೂರಿನ ಕನ್ನಡದ ಹುಡುಗಿ ಜೊತೆಗೆ ಅವರು ಮದುವೆಯಾಗ್ತಿರುವುದು ವಿಶೇಷ..
ಹೌದು..! ಕರ್ನಾಟಕ ಮೂಲದ ಇಂಟೀಯರ್ ಡಿಸೈನರ್ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.. ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಈ ಬಗ್ಗೆ ನಾಗ ಶೌರ್ಯ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದು , ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..