BBK9 : ಈ ವಾರ ನೋ ಎಲಿಮಿನೇಷನ್..!!!
ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಗಳ ಪೈಕಿ ಈ ವಾರ ಯಾವ ಸ್ಪರ್ಧಿ ಹೊರ ನಡೆಯುತ್ತಾರೆಂದು ವೀಕ್ಷಕರು ಕಾತರದಿಂದೆ ಎದುರು ನೋಡುತ್ತಿದ್ದರು.. ಆದ್ರೆ ಈ ವಾರ ಒಂದು ಟ್ವಿಸ್ಟ್ ಕೊಟ್ಟಿರುವ ಬಿಗ್ ಬಾಸ್ ಯಾರನ್ನೂ ಮನೆಗೆ ಕಳುಹಿಸಿಲ್ಲ..
ಹೌದು..!
ಈ ವಾರ ನೋ ಎಲಿಮಿನೇಷನ್ ಎನ್ನಲಾಗ್ತಿದೆ..
ಈ ಮೂಲಕ ನಾಮಿನೇಷನ್ ಲಿಸ್ಟ್ ನಲ್ಲಿದ್ದ ಸ್ಪರ್ಧಿಗಳು ಫುಲ್ ಖುಷ್ ಆಗಿದ್ದಾರೆ..
ಅಂದ್ಹಾಗೆ ಈ ವಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದವರೆಂದ್ರೆ ರೂಪೇಶ್ ರಾಜಣ್ಣ… ದಿವ್ಯಾ ಉರುಡುಗರನ್ನ ಫೇಕ್ ಎಂದ ನಂತರ ಮನೆ ಮಂದಿಯಲ್ಲ ಅವರ ವಿರುದ್ದ ತಿಒರುಗಿಬಿದ್ದಿದ್ದರು.. ಅಲ್ದೇ ಬಹುತೇಕರು ಅವರನ್ನ ಫೇಕ್ ಎಂದಿದ್ರು.. ಇದರಿಂದ ರೂಪೇಶ್ ರಾಜಣ್ಣ ತೀವ್ರ ಆಕ್ರೋಶಗೊಂಡಿದ್ದರು..
ಇನ್ನೂ ಅನೇಕರು ರಾಜಣ್ಣ ಹೊರ ಬರಲಿ ಎಂದೇ ಹೇಳುತ್ತಿದ್ದರು ಕೂಡ..
ಮತ್ತೊಂದೆಡೆ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.. ಸೋನು ಗೌಡ , ಚಕ್ರವರ್ತಿ ಚಂದ್ರಚೂಡ್ , ಸಾನ್ಯಾ ಮತ್ತೆ ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗ್ತಿದೆ..