Kantara : ಬಾಕ್ಸ್ ಆಫೀಸ್ ನಲ್ಲಿ ‘ಪುಷ್ಪ’ರಾಜನ ದಾಖಲೆ ಮುರಿದ ‘ಶಿವ’..!!
ಕಾಂತಾರವನ್ನ ರಾಜಕಾರಣಿಗಳು ,ಸೆಲೆಬ್ರಿಟಿಗಳು , ಪರ ಭಾಷಾ ಸ್ಟಾರ್ ಗಳು , ಅಭಿಮಾನಿಗಳು , ಪರ ಭಾಷಾ ಪ್ರೇಕ್ಷಕರೂ ಮೆಚ್ಚಿಕೊಂಡಿದ್ಧಾರೆ..
ಬಾಕ್ಸ್ ಆಫೀಸ್ ಲೂಟಿ ಮಾಡ್ತಿದೆ.. ಪರ ಭಾಷೆಗಳಲ್ಲೂ ಅಬ್ಬರಿಸುತ್ತಿದ್ದು , ರಾಜಕೀಯ ಗಣ್ಯರು , ಎಲ್ಲಾ ಭಾಷೆಯ ಸ್ಟಾರ್ ಗಳಿಂದ ಸಿನಿಮಾ ಮೆಚ್ಚುಗೆ ಪಡೆಯುತ್ತಾ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ..
ರಿಷಬ್ ಶೆಟ್ಟಿ ನಿರ್ದೇಶಿಸಿ , ನಟಿಸಿ , ಹೊಂಬಾಳೆ ಫಿಲಮ್ಸ್ ನಿರ್ಮಿಸಿರು ಸಿನಿಮಾ ದಿನದಿಂದ ದಿನಕ್ಕ3ೆ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಾ ಮುಂದೆ ಸಾಗ್ತಿದೆ..
ಇತ್ತೀಚೆಗೆ ಸಿನಿಮಾ ಕರ್ನಾಟಕದಲ್ಲಿ 1 ಕೋಟಿ ಟಿಕೆಕ್ ಮಾರಾಟವಾದ ದಾಖಲೆ ತನ್ನದಾಗಿಸಿಕೊಂಡಿದೆ.. ಇದೀಗ ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದ ರೆಕಾರ್ಡ್ ಬ್ರೇಕ್ ಮಾಡಿದೆ.
ವಿಶ್ವಾದ್ಯಂತ ಕಾಂತಾರ ವರೆಗೂ 355.19 ಕೋಟಿ ರುಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ.. ಅಲ್ಲದೇ ಈ ಮೂಲಕ ಪುಷ್ಪಾ ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಹಿಂದಿ ವೃತ್ತಿಯಲ್ಲಿ ಈ ಸಿನಿಮಾ ಈ ವಾರಾಂತ್ಯಕ್ಕೆ 75 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆಯಾಯಿತು. ಸಿನಿಮಾದ ಕ್ರೇಜ್ ನೋಡಿ ಇತರೇ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಲಾಯ್ತು..
ಬಾಕ್ಸ್ ಆಫೀಸ್ ಸೌತ್ ಇಂಡಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು “#ಕಾಂತಾರ #ಪುಷ್ಪಾ1 ರ ಅಂತಿಮ ಗಳಿಕೆಯನ್ನು ಮೀರಿಸಿದೆ. #PushpaTheRise – 350.3 ಕೋಟಿ. #KantaraMovie – 355.19 ಕೋಟಿ ಎಂದು ಪ್ರಕಟಿಸಿದೆ..
ಅಂದ್ಹಾಗೆ ಕಾಂತಾರದ ಕ್ರೇಜ್ ಇನ್ನೂ ನಿಂತಿಲ್ಲ.. ಇನ್ನೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು , ಇನ್ನಷ್ಟು ದಾಖಲೆಗಳ ಮುರಿಯುವ ಸಾಧ್ಯತೆಯಿದೆ..