Pavan Kalyan : ಕಾರಿನ ಟಾಪ್ ಮೇಲೆ ಕುಳಿತು ಬಂದ ಪವನ್ – ಪೊಲೀಸರಿಂದ ಕೇಸ್ ದಾಖಲು
ಟಾಲಿವುಡ್ ನ ಡೇರಿಂಗ್ ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಹಾಗೂ ಆಡಳಿತ ರೂಢ ಪಕ್ಷ YSR ನಡುವೆ ಜಟಾಪಟಿ ಯಾವ ಮಟ್ಟದಲ್ಲಿದೆ ಅನ್ನೋ ವಿಚಾರ ಗೊತ್ತೇ ಇದೆ..
ಇತ್ತೀಚೆಗೆ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತು ಬಂದಿದ್ದರು.. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ Social Media ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿತ್ತು..
ಇದೀಗ ಕಾರಿನ ರೂಫ್ ನಲ್ಲಿ ಕುಳಿತು ಬಂದ ಹಿನ್ನೆಲೆ ಪವನ್ ಕಲ್ಯಾಣ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅತಿವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದುಕೊಂಡ ಆರೋಪದ ಮೇಲೆ ಪವನ್ ಕಲ್ಯಾಣ್ ವಿರುದ್ಧ FIR ದಾಖಲಿಸಲಾಗಿದೆ.
ಅಷ್ಟೇ ಅಲ್ಲ ಪವನ್ ಕಲ್ಯಾಣ್ ಈ ರೀತಿ ಬಂದಂತಹ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ನಿಯಂತ್ರಣತಪ್ಪಿ ಬಿದ್ದಿದ್ದಾನೆ ಎಂದು ಪಿ.ಶಿವಕುಮಾರ್ ಎಂಬವರು ದೂರು ನೀಡಿದ್ದಾರೆ. ಪವನ್ ಕಲ್ಯಾಣ್ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ದೂರಿನ ಮೇರೆಗೆ ಕೇಸ್ ದಾಖಲಾಗಿದೆ.