RRR ಪಾರ್ಟ್ 2..?? ಸುಳಿವು ಕೊಟ್ಟ ಮೂವಿ ಮಾಂತ್ರಿಕ ರಾಜಮೌಳಿ..!!
ನಿರ್ದೇಶಕ ರಾಜಮೌಳಿ ಸಿನಿ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. NTR ಮತ್ತು ರಾಮ್ ಚರಣ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ RRR ಚಿತ್ರದ ಪಾರ್ಟ್ 2 ಗೆ ತಯಾರಿ ನಡೆಸುತ್ತಿದ್ದೇವೆ ಎಂದು ರಾಜಮೌಳಿ ಬಹಿರಂಗಪಡಿಸಿದ್ದಾರೆ.
ಆಸ್ಕರ್ ಅಭಿಯಾನದ ಅಂಗವಾಗಿ ಅಮೆರಿಕಾದ ಹಲವಾರು ಕಡೆ RRR ಚಿತ್ರದ ಸ್ಕ್ರೀನಿಂಗ್ ನಡೆಯುತ್ತಿದ್ದು, ರಾಜಮೌಳಿ ಹಲವಾರು ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ RRR ಚಿತ್ರದ ಸೀಕ್ವೆಲ್ ಮಾಡಲು ಯೋಚಿಸುತ್ತಿದ್ದೀರ ಎಂಬ ಪ್ರಶ್ನೆಯನ್ನ ನಿರ್ದೆಶಕರಿಗೆ ಕೇಳಲಾಯಿತು.
ಈ ಕುರಿತು ರಾಜಮೌಳಿ ಮಾತನಾಡಿದ್ದು, ನನ್ನ ಎಲ್ಲಾ ಸಿನಿಮಾಗಳಿಗೂ ನನ್ನ ತಂದೆಯೇ ಬರಹಗಾರರು. ನಾವು RRR 2 ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ ಅವರು ಕೂಡ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.