BBK9 : ಆರ್ಯವರ್ಧನ್ ಗುರೂಜಿಗೆ ಬಿಗ್ ಶಾಕ್..!! ಕಣ್ಣೀರಲ್ಲಿ ಮನೆ ಮಂದಿ..!!
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದು ಟಿವಿ ಸೀಸನ್ ಗೂ ಪ್ರವೇಶಿಸಿ ಎಲ್ಲಿಯೂ ಹೈಲೇಟ್ ಆಗುತ್ತಿರುವ ರ್ಯವರ್ಧನ್ ಗುರೂಜಿ ಕೆಲ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.. ಒಂದು ಬಾರಿ ಕ್ಯಾಪ್ಟನ್ ಸಹ ಆಗಿದ್ದರು..
ತಮ್ಮ ಆಟ ಆಡಲು ಇತರರ ಜೊತೆಗೆ ಚನಾಗಿರುವಂತಹ ಬುದ್ದಿ ಗುರೂಜಿಯದ್ದು ಅನ್ನೋದು ಮನೆಯ ಬಹುತೇಕ ಸ್ಪರ್ಧಿಗಳ ಅಭಿಪ್ರಾಯ..
ಅಂದ್ಹಾಗೆ ಈ ವೀಕೆಂಡ್ ಸಂಚಿಕೆಯ ನಂತರ ಆರ್ಯವರ್ಧನ್ ಗುರೂಜಿಗೆ ಬಿಗ್ ಶಾಕ್ ನೀಡಲಾಗಿದೆ..
ಶನಿವಾರ ಎಪಿಸೋಡ್ ಮುಗಿಯುತ್ತಿದ್ದಂತೆಯೇ ಆ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರನ್ನು ಹೊರಹಾಕಲಾಗುತ್ತದೆ.
ಈ ವಾರ ನೀವು ಮನೆಯಿಂದ ಹೊರ ಬರುತ್ತಿದ್ದೀರಿ ಎಂದು ಗುರೂಜಿಗೆ ಸುದೀಪ್ ಅವರು ಹೇಳಿದ್ದಾರೆ..
ಆಗ ಗುರೂಜಿ ನನಗೆ 13 ನಂಬರ್ ಆಗಿ ಬರಲ್ಲ, ನಾಮಿನೇಟ್ ಮಾಡಬೇಡಿ ಅಂದರೂ ಕೇಳಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಗುರೂಜಿ ಎಲಿಮಿನೇಷನ್ ಅನೌನ್ಸ್ ಆಗಿದ್ದೇ ತಡ ರೂಪೇಶ್ ಶೆಟ್ಟಿ ಗಳಗಳನೆ ಅತ್ತಿದ್ದಾರೆ.
ಮನೆಯಿಂದ ಆಚೆ ಬರಲು ಕೆಲವೇ ನಿಮಿಷಗಳಿತ್ತು.. ಸೂಟ್ ಕೇಸ್ ರೆಡಿ ಮಾಡಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ ಗುರೂಜಿ ಹೊರಡಲು ರೆಡಿಯಾದ್ರು..
ಕೆಲವರು ಅತ್ತರು, ಇನ್ನೂ ಕೆಲವರು ಕ್ಷಮೆ ಕೇಳಿದರು. ಆ ನಂತರ ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನ ಗುರೂಜಿಗೆ ಬಿಗ್ ಬಾಸ್ ನೀಡಿದರು..
ಇನ್ನೇನು ಗುರೂಜಿ ನೇರ ನಾಮಿನೇಟ್ ಮಾಡಲು ಜನರನ್ನು ಹುಡುಕುವಾಗಲೇ ಮತ್ತೇ ಬಿಗ್ ಬಾಸ್ ಧ್ವನಿ ಕೇಳಿತ್ತು..
ಈ ವಾರ ಯಾವುದೇ ವೋಟಿಂಗ್ ಮತ್ತು ನಾಮಿನೇಷನ್ ಪ್ರಕ್ರಿಯೆ ಇರದೇ ಇರುವ ಕಾರಣಕ್ಕಾಗಿ ಈ ವಾರ ಯಾರೂ ಮನೆಯಿಂದ ಆಚೆ ಹೋಗುತ್ತಿಲ್ಲವೆಂದು ಘೋಷಣೆ ಮಾಡಿಬಿಟ್ಟರು…
ಗುರೂಜಿ ನೀವು ಮನೆ ಒಳಗೆ ಹೋಗಬಹುದು ಎಂದು ಹೇಳಿದ್ದೇ ತಡ ಎಲ್ಲರೂ ಕಣ್ ಹಿಗ್ಗಿಸಿದ್ದರು.. ಆರ್ಯವರ್ಧನ್ ಗಂತೂ ನಂಬಿಕೆಯೇ ಬಾರದೇ ಒಂದು ಕ್ಷಣ ಶಾಕ್ ಆಗಿಬಿಟ್ಟಿದ್ದರು..
ಕಣ್ಣೀರು ಹಾಕುತ್ತಲೇ ಗುರೂಜಿ ವಿಶೇಷ ಧನ್ಯವಾದಗಳನ್ನು ತಿಳಿಸಿ ಬಿಗ್ ಬಾಸ್ ಮನೆ ಒಳಗೆ ಹೋದರು.