Ragini Dwivedi : ಬಿಂಗೋದಲ್ಲಿ ತುಪ್ಪದ ಬೆಡಗಿ ರಾಗಿಣಿ..!!!
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್ ನಲ್ಲಿ ಸಿಲುಕಿ ನಂತರ ಜೈಲಿನಿಂದ ಹೊರ ಬಂದಾಗಿನಿಂದ ವರ್ಕೌಟ್ , ಸಿನಿಮಾಗಳು , ಸೋಷಿಯಲ್ ಮೀಡಿಯಾ ಅಂತ ಬ್ಯುಸಿಯಾಗಿದ್ದಾರೆ… ಬಾಲಿವುಡ್ , ಕಾಲಿವುಡ್ ನಲ್ಲೂ ಸಕ್ರಿಯರಾಗ್ತಿದ್ದಾರೆ..
ಅಂದ್ಹಾಗೆ ಕರ್ವ 3 ಸಿನಿಮಾದಲ್ಲೂ ರಾಗಿಣಿ ಬ್ಯುಸಿಯಿದ್ದಾರೆ.. ಇದೀಗ ಬಿಂಗೋ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿರೋದಾಗಿ ಘೋಷಣೆಯಾಗಿದೆ..

ಅಂದ್ಹಾಗೆ ಈ ಸಿನಿಮಾ R K ಸ್ಟುಡಿಯೋಸ್ ಮುತರಾ ವೆಂಚರ್ಸ್ ಲಾಂಛನದಲ್ಲಿ ಬರುತ್ತಿದ್ದು , ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಬಂಡವಾಳ ಹೂಡುತ್ತಿದ್ದಾರೆ.. ಶಂಕರ್ ಕೋನಮಾನಹಳ್ಳಿ ಆಕ್ಷನ್ ಕಟ್ ಹೇಳ್ತಿದ್ದಾರೆ..
ಆರ್ ಕೆ ಚಂದನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಬಿಂಗೊ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.