Urfi Javed ಗೆ ಧಮ್ಕಿ ಹಾಕಿದ ಹಿಂದುಸ್ತಾನಿ ಭಾವು..!!
ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..
ಆದ್ರೆ ಉರ್ಫಿ ಜಾವೇದ್ ಇದೀಗ ಅಶ್ಲೀಲತೆಯ ಎಲ್ಲೆ ಮೀರಿದ್ದಾರೆ ಎನಿಸುತ್ತಿದೆ…
ಅಂದ್ಹಾಗೆ ಹಿಂದಿ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ ನಲ್ಲಿ ಸ್ಪರ್ಧಿಸಿದ ಬಳಿಕ ನಟಿ ಉರ್ಫಿ ಜಾವೇದ್ ಖ್ಯಾತಿ ಹೆಚ್ಚಿತು. ಆದರೆ ಅವರು ಅದಕ್ಕಿಂತಲೂ ಹೆಚ್ಚು ಪ್ರಚಾರ ಪಡೆದಿದ್ದು ಚಿತ್ರ-ವಿಚಿತ್ರ ಬಟ್ಟೆ ಧರಿಸುವ ಮೂಲಕ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಡ್ರೆಸ್ ಹಾಕಿಕೊಂಡು ಫೋಟೋಗೆ ಪೋಸ್ ನೀಡುವುದನ್ನೇ
ಇದೀಗ ಖಡಕ್ ಡೈಲಾಗ್ ಗಳ ಮೂಲಕವೇ ವೈರಲ್ ಆಗಿದ್ದ ಹಿಂದೂಸ್ತಾನಿ ಭಾವು ಉರ್ಫಿಗೆ ಉತ್ತಮ ಬಟ್ಟೆಗಳನ್ನು ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ.. ವಿಡಿಯೋ ಮೂಲಕ ಉರ್ಫಿಗೆ ವಾರ್ನಿಂಗ್ ಕೊಟ್ಟಿದ್ದಾರೆ..
ಹಿಂದೂಸ್ತಾನಿ ಭಾವು ಅಕಾ ವಿಕಾಸ್ ಫಟಕ್ ಅವರು ಧರಿಸಿರುವ ಮತ್ತು ಧರಿಸುವ ರೀತಿಯ ಬಟ್ಟೆ ಭಾರತೀಯ ಪದ್ಧತಿ ಅಥವಾ ಸಂಸ್ಕೃತಿಯಲ್ಲಿಲ್ಲ ಎಂದು ಹೇಳಿದ್ದಾರೆ..
ಈ ಮೂಲಕ ಉರ್ಫಿ ದೇಶದ ಇತರೆ ಹೆಣ್ಣು ಮಕ್ಕಳಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಸುಧರ್ ಜಾವ್ ಬೇಟಾ ಯಾ ಮೇ ಸುಧಾರ್ ದೂಂಗಾ..!! ಅಂದ್ರೆ ಸರಿ ಹೋಗು ಇಲ್ಲ ನಾನು ಸರಿಪಡಿಸುತ್ತೇನೆಂದು ಎಚ್ಚರಿಕೆ ನೀಡಿದ್ಧಾರೆ..