Yashodha : ಕಠಿಣ ತರಬೇತಿಯ ಗ್ಲಿಂಪ್ಸ್ ಹಂಚಿಕೊಂಡ ಸ್ಯಾಮ್..!!
ಮಹಿಳಾ ಪ್ರಧಾನ ಸಿನಿಮಾಗಳತ್ತ , ಅದ್ರಲ್ಲೂ ಸಾಹಸಮಯ ಚಿತ್ರಗಳಿಗೆ ಲವು ತೋರಿಸುತ್ತಿದ್ದಾರೆ ನಟಿಯರು.. ಅದ್ರಲ್ಲೂ ಸಮಂತಾ ನಟನೆಯ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ , ಸೆರೋಗೆಸಿ ಹಗರಣದ ಕುರಿತಾದ ಪ್ಯಾನ್ ಇಂಡಿಯಾ ಸಿನಿಮಾ ಯಶೋಧ ನವೆಂಬರ್ 11 ರಿಲೀಸ್ ಆಗಿ ವಿಶ್ವಾದ್ಯಂತ ಸದ್ದು ಮಾಡ್ತಿದೆ..
ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ.. ಅಂದ್ಹಾಗೆ ಈ ಸಿನಿಮಾದಲ್ಲಿ ಸಮಂತಾ ಆಕ್ಷನ್ ಸೀನ್ಸ್ ಗಳನ್ನ ಮಾಡಿದ್ದು , ಭಾರೀ ಸ್ಟಂಟ್ಸ್ ಗಳನ್ನ ಮಾಡಿದ್ದಾರೆ.. ಸಾಕಷ್ಟು ಶ್ರಮ ಪಟ್ಟು ಟ್ರೇನಿಂಗ್ ಮಾಡಿದ್ದಾರೆ..
ಅಂದ್ಹಾಗೆ ಅವರ ಟ್ರೇನಿಂಗ್ ಸಮಯದ ಸಣ್ಣ ಗ್ಲಿಂಪ್ಸ್ ಅನ್ನ ಸಮಂತಾ ಶೇರ್ ಮಾಡಿಕೊಂಡಿದ್ದಾರೆ..
ಭಾನುವಾರ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ತರಬೇತಿ ವಿಡಿಯೋ ಹಂಚಿಕೊಂಡಿದ್ದಾರೆ..
ಚಿತ್ರದಲ್ಲಿ ಸಮಂತಾ ಬಾಡಿಗೆ ತಾಯಿಯಾಗಿ ನಟಿಸಿದ್ದು, ಗಂಭೀರ ವೈದ್ಯಕೀಯ ಅಪರಾಧದ ರಹಸ್ಯಗಳನ್ನು ಧೈರ್ಯದಿಂದ ಬಿಚ್ಚಿಟ್ಟಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ತಮ್ಮ ಕನಸುಗಳನ್ನು ಈಡೇರಿಸಲು ಜನರಿಗೆ ಸಹಾಯ ಮಾಡುವ ಕಂಪನಿಯಾದ ಇವಾದಲ್ಲಿ ದಾಖಲಾದ ನಂತರದಿಂದ ದುರಿಸುವ ಸವಾಲುಗಳ ಸುತ್ತ ಕಥೆ ಸುತ್ತುತ್ತದೆ..
View this post on Instagram