BBk9 : ರಾಕಿ – ಅಮೂಲ್ಯ ನಡುವೆ ಹೆಚ್ಚಾಗುತ್ತಿದ್ಯಾ ಆತ್ಮೀಯತೆ..??
ಬಿಗ್ ಬಾಸ್ ಕನ್ನಡ ಸೀಸನ್ 9 ದಿನೇ ದಿನೇ ರೋಚಕತೆಯಿಂದ ಸಾಗುತ್ತಿದೆ.. ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ರಾಕಿ – ಅಮೂಲ್ಯ ನಡುವೆ ಇದೀಗ ಮತ್ತೆ ಕುಚ್ ಕುಚ್ ಶುರುವಾದಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು..
ಒಟಿಟಿಯಲ್ಲಿ ಸೋನು ಜೊತೆಗೆ ಸಖತ್ ಕ್ಲೋಸ್ ಆಗಿದ್ದ ರಾಕೇಶ್ ಮಹಿಳಾ ಸ್ಪರ್ಧಿಗಳ ಜೊತೆಗೆ ಫ್ಲರ್ಟ್ ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.. ಕೊಂಚ ಅಮೂಲ್ಯ ಜೊತೆಗೆ ಟಿವಿ ಸೀಸನ್ ನಲ್ಲಿ ಆತ್ಮಿಯರಾಗಿರುವಂತೆ ತೋರುತ್ತಿದೆ..
ಅದ್ರಲ್ಲೂ ಇತ್ತೀಚೆಗೆ ನಿನಗೆ ಏನೇ ಕಷ್ಟ ಇದ್ದರೂ ನನಗೆ ಹೇಳಿಕೋ ಎಂದು ಅಮೂಲ್ಯಗೆ ರಾಕೇಶ್ ಭರವಸೆ ಕೊಟ್ಟಿದ್ದಾರೆ.. ಮನೆಯವರ ನೆನಪಾಗುತ್ತಿದೆ ಎಂದು ಅಮೂಲ್ಯ ಬೇಜಾರಾದಾಗ ಅವರಿಗೆ ರಾಕೇಶ್ ಸಮಾಧಾನ ಮಾಡಿದ ರೀತಿ ಇದೀಗ ಗಮನ ಸೆಳೆಯುತ್ತಿದೆ..
ಮನೆಯವರ ನೆನಪಾಗ್ತಿದೆ.. ಮನೆಗೆ ಹೋಗಲೇಬೇಕು ಅಂತ ಅನಿಸುತ್ತಿದೆ. ಆದರೆ ಏನು ಮಾಡೋಕೆ ಆಗುತ್ತೆ ಎಂದು ಅಮೂಲ್ಯ ಹೇಳಿದ್ದು , ನಾವೆಲ್ಲ ಲೈಕ್ ಮೈಂಡೆಡ್ ಇರೋದರಿಂದ ಓಕೆ, ನಿನಗೆ ಏನೇ ಬೇಸರ ಇದ್ದರೂ, ಹೇಳೋದ್ದಕ್ಕೆ ಹಿಂಜರಿಯಬೇಡ. ನೀನು ನಮ್ಮ ಮನೆಯಲ್ಲಿ ಒಬ್ಬಳು ಎಂದು ಫೀಲ್ ಆಗುತ್ತೀಯಾ ಎಂದು ಅಮೂಲ್ಯಗೆ ರಾಕೇಶ್ ಹೇಳಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯ ವೀಕ್ಷಕರಿಗೆ ಖುಷಿ ಕೊಡುತ್ತಿದೆ..