Komal : 7 ವರ್ಷ ಸಿನಿಮಾ ಮಾಡದಂತೆ ಕೋಮಲ್ ಗೆ ಜಗ್ಗೇಶ್ ಸಲಹೆ ಕೊಟ್ಟಿದ್ಯಾಕೆ..??
ಕೆಂಪೇಗೌಡ ಸಿನಿಮಾದ ನಂತರ ಸಂಪೂರ್ಣವಾಗಿ ಸಿನಿಮಾರಂಗದಿಂದಲೇ ದೂರ ಉಳಿದಿದ್ದ ಪ್ರತಿಭಾನ್ವಿತ ಹಾಸ್ಯ ನಟ ಕೋಮಲ್ ಅವರು ಇದೀಗ ಸರಿ ಸುಮಾರು 4-5 ವರ್ಷಗಳ ನಂತರ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ..
ಆದ್ರೆ ಅವರು ನಟನೆಯಿಂದ ಬ್ರೇಕ್ ಯಾಕೆ ಪಡೆದರು ಎಂಬ ವಿಚಾರ ಸದ್ಯ ಯಾರಿಗೂ ತಿಳಿದಿರಲಿಲ್ಲ.. ಆದ್ರೆ ಅವರು ಬಣ್ಣದ ಜಗತ್ತಿನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಕಾರಣ ಗ ಗೊತ್ತಾಗಿದೆ..
ಹೌದು..!
ಕೋಮಲ್ ಅವರಿಗೆ ಕೇತುದೆಸೆ ಇದ್ದ ಕಾರಣಕ್ಕೆ ಅವರು ತಮ್ಮ ಸಹೋದರ , ನಟ ಹಾಗೂ ರಾಜಕಾರಣಿ ಜಗ್ಗೇಶ್ ಅವರ ಸಲಹೆ ಮೇರೆಗೆ ಸಿನಿಮಾರಂಗದಿಂದ ಅಂತರ ಪಡೆದಿದ್ದರಂತೆ..
ಜಗ್ಗೇಶ್ ಅವರ ಸಲಹೆ ಮೇರೆಗೆ ಸಿನಿಮಾ ಮಾಡಲಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ.. ಸದ್ಯ ದೀಗ ಮತ್ತೆ ಕಮ್ ಬ್ಯಾಕ್ ಮಾಡ್ತಿರುವ ಕೋಮಲ್ ಅವರು ಮತ್ತೊಮ್ಮೆ ತಮ್ಮ ಮನೋಜ್ಞ ನಟನೆ ಹಾಸ್ಯದ ಮೂಲಕ ಜನರನ್ನ ಮೋಡಿ ಮಾಡ್ತಾರಾ ಕಾದು ನೋಡ್ಬೇಕಿದೆ..
ಸದ್ಯ ಕೋಮಲ್ ನಟನೆಯ ನಮೋ ಭೂತಾತ್ಮ ಸಿನಿಮಾ ಭಾಗ 2 ಬರಲಿದೆ ಎನ್ನಲಾಗ್ತಿದೆ..