Allu Arjun : ನಿರ್ಮಾಣ ಸಂಸ್ಥೆ ಎದುರು ಯುವತಿ ಬೆತ್ತಲೆ ಪ್ರತಿಭಟನೆ
ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಅವರ ತಂದೆಯ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಎದುರಿಗೆ ಯುವತಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ..
ಹೈದ್ರಾಬಾದ್ ನಲ್ಲಿರುವ ಗೀತಾ ಆರ್ಟ್ಸ್ ಸಂಸ್ಥೆ ಎದುರಿಗೆ ಸುನಿತಾ ಬೊಯಾ ಎಂಬಾಕೆ ಸಂಸ್ಥೆಯ ಸಹ ನಿರ್ಮಾಪಕ ಬನ್ನಿ ವಾಸುವಿನಿಂದ ತನಗೆ ಅನ್ಯಾಯವಾಗಿದೆ..
ಬನ್ನಿ ವಾಸು ತನ್ನನ್ನ ಮದುವೆಯಾಗೋದಾಗಿ ಹೇಳಿ ಮೋಸ ಮಾಡಿದ್ದಾನೆಂದು ಆರೋಪಿಸಿ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.. ಆಕೆಯನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದ್ಹಾಗೆ ಸುನಿತಾ ಪ್ರತಿಭಟನೆ ಮಾಡುತ್ತಿರುವುದು ಇದೇನು ಮೊದಲಲ್ಲ.. ಈ ಹಿಂದೆಯೂ ಬನ್ನಿ ವಾಸು ವಿರುದ್ಧ ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ..