Amir Khan : ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಮಿರ್ ಖಾನ್ ಪುತ್ರಿ ಇರಾ..!!
ಅಮಿರ್ ಖಾನ್ ಪುತ್ರಿ ಇರಾ ಖಾನ್ ಅವರು ನಿಶ್ಚತಾರ್ಥದ ಸಂಭ್ರಮದಲ್ಲಿದ್ದಾರೆ..
ಇರಾ ಖಾನ್ ಇಂದು ಮುಂಬೈನಲ್ಲಿ ತನ್ನ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಚಿತ್ರಗಳಲ್ಲಿ, ಇರಾ ಖಾನ್ ಸುಂದರವಾದ ಕೆಂಪು ಗೌನ್ ಧರಿಸಿರುವುದನ್ನು ಕಾಣಬಹುದು, ಆದರೆ ಆಕೆಯ ಗೆಳೆಯ ನೂಪುರ್ ಶಿಖರೆ ಕಪ್ಪು ಸೂಟ್‌ನಲ್ಲಿ ಕಾಣಬಹುದಾಗಿದೆ.
ನಿಶ್ಚಿತಾರ್ಥ ಸಮಾರಂಭದಲ್ಲಿ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಕಿರಣ್ ರಾವ್, ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಮತ್ತು ಅಜ್ಜಿ ಜೀನತ್ ಹುಸೇನ್ ಭಾಗವಹಿಸಿದ್ದರು.
ವೈರಲ್ ಚಿತ್ರಗಳಲ್ಲಿ ಅಮೀರ್ ಖಾನ್ ಎಥ್ನಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಕುರ್ತಾಗೆ ಹೊಂದಿಕೆಯಾಗುವ ಧೋತಿಯನ್ನು ಧರಿಸಿದ್ದಾರೆ.
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾದ ನೂಪುರ್ ಶಿಖರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು.
ಇರಾ ಖಾನ್ ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ.
Amir khan’s daughter ira khan engagement