Junior NTR : ಸ್ಯಾಂಡಲ್ ವುಡ್ ನಲ್ಲಿ ತಾರಕ್..!??
ಟಾಲಿವುಡ್ ನ ಸ್ಟಾರ್ ನಟ ಜ್ಯುಊ. NTR ಅವರ ತಾಯಿ ಕರ್ನಾಟಕದ ಮೂಲದವರೇ ಎಂಬುದು ಗೊತ್ತೇ ಇದೆ.. RRR ಸ್ಟಾರ್ NTR ಗೆ ಕರ್ನಾಟಕದ ಮೇಲೆ ವಿಶೇಷವಾದ ಒಲವಿದೆ.. ಕನ್ನಡದಲ್ಲೂ ಅಚ್ಚುಕಟ್ಟಾಗಿ ಮಾತನಾಡ್ತಾರೆ..
ಅಪ್ಪು ಜೊತೆಗೆ ಒಳ್ಳೆಯ ಬಾಂಧವ್ಯವೂ ಇತ್ತು.. ಅಲ್ಲದೇ ಕನ್ನಡದಲ್ಲಿ ಗೆಳೆಯ ಗೆಳೆಯ ಹಾಡನ್ನೂ ಕೂಡ ಹಾಡಿದ್ದರು..
ಇದೀಗ ಟಾಲಿವುಡ್ ನ ‘ತಾರಕ್’ ಚಂದನವನಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ..
ತಾರಕ್ ನಟನೆಯ 31ನೇ ಸಿನಿಮಾಗೆ ಕನ್ನಡದ KGF ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಲಿದ್ದಾರೆ.. ಈ ಸಿನಿಮಾ ಪ್ಯಾನ್ ಇಂಡಿಯಾ ಆಗಲಿದ್ದು , ಕನ್ನಡದಲ್ಲಿ ಖುದ್ದು NTR ವಾಯ್ಸ್ ಡಬ್ ಮಾಡಲಿರುವುದು ವಿಶೇಷ..
ಅಂದ್ಹಾಗೆ ಈಗಾಗಲೇ RRR ಸಿನಿಮಾದ ಕನ್ನಡ ಆವೃತ್ತಿಗೂ ಜ್ಯೂ. NTR ಧ್ವನಿ ನೀಡಿ ಗಮನ ಸೆಳೆದಿದ್ದಾರೆ..