Love Today : 14 ದಿನಗಳಲ್ಲಿ 40 ಕೋಟಿ ಕಲೆಕ್ಷನ್
ತಮಿಳಿನ ‘ಲವ್ ಟುಡೇ’ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರಿಂದ ಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಒಂದೊಳ್ಳೆ ಕಾನ್ಸೆಪ್ಟ್ ಈ ಸಿನಿಮಾದಲ್ಲಿದ್ದು , ರಿಲೀಸ್ ಆದ 14 ದಿನಗಳಲ್ಲಿ ಸುಮಾರು 40 ಕೋಟಿ.ರೂ ಗಳಿಸಿದೆ..
ಅಂದ್ಹಾಗ ಈ ಸಿನಿಮಾದ ನಾಯಕ ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿರುವ ಮೊದಲನೇ ಸಿನಿಮಾವಿದಾಗಿದೆ..
ನಿರ್ದೇಶನವೂ ಅವರದ್ದೇ ಆಗಿದ್ದು ನಾಯಕನಾಗಿ ಮೊದಲ ಸಿನಿಮಾದಲ್ಲೇ ಪಾಸಿಟಿವ್ ರಿವ್ಯೂವ್ ಗಳಿಸಿ ಖುಷಿಪಟ್ಟಿದ್ದಾರೆ,.
ಅಂದ್ಹಾಗೆ ಇವರ ಮೊದಲ ನಿರ್ದೇಶನದ ಕೊಮಾಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು..
ನವೆಂಬರ್ 4ರಂದು ರಿಲೀಸ್ ಆದ ಲವ್ ಟು ಡೇ ಸಿನಿಮಾವನ್ನ ಜನ ಮೆಚ್ಚಿಕೊಂಡಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ..
ಈ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್ ಹಾಗೂ ನಾಯಕಿ ಇವಾನಾ ನಡುವಿನ ಹಾವು ಮುಂಗುಸಿಯಾಟಕ್ಕೆ ತಮಿಳು ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.
ಈ ನಡುವೆ ಸಿನಿಮಾ ಆನ್ ಲೈನ್ ನಲ್ಲೂ ಲೀಕ್ ಆಗಿದೆ..