NagaShourya : ಕನ್ನಡದ ಹುಡುಗಿ ಜೊತೆ ಮದುವೆಯಾದ ತೆಲುಗು ನಟ ನಾಗಶೌರ್ಯ..!!
ತೆಲುಗಿನ ಜನಪ್ರಿಯ ನಟ ನಾಗಶೌರ್ಯ ಕರ್ನಾಟಕ ಮೂಲದ ಯುವತಿ ಅನುಷಾ ಶೆಟ್ಟಿ ಜೊತೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ..
ಇಬ್ಬರೂ ಬಹಳ ಕಾಲದಿಂದ ಪ್ರೀತಿಸುತ್ತಿದ್ದರು.. ಇಂದು ಗುರು ಹಿರಿಯರು , ಬಂಧುಇ ಬಳಗ , ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು , ಇಬ್ಬರ ಮದುವೆ ಫೋಟೋಗಳು ವೈರಲ್ ಆಗ್ತಿವೆ..
ಇಬ್ಬರಿಗೂ ಅಭಿಮಾನಿಗಳು , ಆಪ್ತರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಕುಂದಾಪುರದ ಮೂಲದ ಹುಡುಗಿ ಅನುಷಾ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ..
(ನವೆಂಬರ್ 20) ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಮದುವೆ ಸಮಾರಂಭ ನಡೆದಿದೆ.