BBK9 : ಮನೆಯವರಿಗೆಲ್ಲಾ ಇವರೇ ಟಾರ್ಗೆಟ್..!?? ಸ್ವಾರ್ಥಿ ಎಂದಿದ್ಯಾರನ್ನ..!!??
BBK9 ಸಾಕಷ್ಟು ರೋಚಕತೆಯಿಂದಲೇ ಮುಂದೆ ಸಾಗ್ತಿದೆ.. ಈ ವಾರ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ.. ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ದಿನಂತೆ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡು , ಕಾಲೆಳೆದು ಮಾತುಕತೆ ನಡೆಸಿದ್ದಾರೆ..
ಈ ನಡುವೆ ಮನೆ ಮಂದಿಯಲ್ಲಾ ರೂಪೇಶ್ ರಾಜಣ್ಣ ಸ್ವಾರ್ಥಿ ಎಂದು ದೂರಿದ್ದಾರೆ.. ಆರಂಭದಲ್ಲಿ ಸೈಲೆಂಟ್ ಇದ್ದ ರಾಜಣ್ಣ ಬರ ಬರುತ್ತಾ ಸಿಕ್ಕಾಪಟ್ಟೆ ವೈಲೆಂಟ್ ಆಗಿರುವಂತೆ ತೋರುತ್ತಿದೆ..
ಹೆಚ್ಚು ಕಾಳಜಿ ಮಾಡುವುದು ಯಾರು ಮತ್ತು ಹೆಚ್ಚು ಸ್ವಾರ್ಥ ಬುದ್ದಿ ಹೊಂದಿರುವವರು ಯಾರು ಎಂದು ಸುದೀಪ್ ಎದುರಲ್ಲೇ ಚರ್ಚೆ ಆಗಿದೆ. ಬಹುತೇಕರು ರೂಪೇಶ್ ರಾಜಣ್ಣರನ್ನ ಸ್ವಾರ್ಥಿ ಎಂದು ಬೊಟ್ಟು ಮಾಡಿದ್ದಾರೆ..
ಒಂದಷ್ಟು ಮಂದಿ ಆರ್ಯವರ್ಧನ್ ಗುರೂಜಿರನ್ನೂ ಸ್ವಾರ್ಥಿ ಎಂದು ಕರೆದಿದ್ದಾರೆ.