Govinda : ಗೋವಿಂದ ಅವರ ಕಾಲಿಗೆ ಬಿದ್ದು ನೀವೇ ನನ್ನ ಸ್ಪೂರ್ತಿ ಎಂದ ಪಾಕ್ ಸ್ಟಾರ್ ನಟ..!!
ಬಾಲಿವುಡ್ ನ ಸ್ಟಾರ್ ನಟ ಗೋವಿಂದ ಅವರ ಕಾಲಿಗೆ ಬಿದ್ದ ಪಾಕಿಸ್ತಾನಿ ನಟ ಫಹಾದ್ ಗೋವಿಂದ ಅವರನ್ನ ತಮ್ಮ ನ್ಸಪಿರೇಷನ್ ಎಂದು ಕರೆದಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಪಾಕಿಸ್ತಾನಿ ನಟ ಫಹಾದ್ ಮುಸ್ತಫಾ ಅವರು ನಿಮ್ಮಿಂದಲೇ ತಾವು ಪ್ರಮುಖ ಪಾತ್ರದಲ್ಲಿ ನಟಿಸಲು ಆರಂಭಿಸಿದ್ದಾಗಿ ಹೇಳುತ್ತಾ ಗೋವಿಂದನನ್ನು ಹೊಗಳಿದರು. ದುಬೈನಲ್ಲಿ ನಡೆದ ಫಿಲ್ಮ್ ಫೇರ್ ಮಿಡಲ್ ಈಸ್ಟ್ ಅಚೀವರ್ಸ್ ನೈಟ್ ನಲ್ಲಿ, ಫಹಾದ್ ಪ್ರಶಸ್ತಿ ಗೆದ್ದರು.. ಬಳಿಕ ಗೋವಿಂದ ಪಾದಗಳನ್ನು ಸ್ಪರ್ಶಿಸಿ , ಅವರ ಆಶೀರ್ವಾದ ಪಡೆಯಲು ವೇದಿಕೆಯಿಂದ ಕೆಳಗಿಳಿದುಬಂದರು..
ನಟನನ್ನು ಗೋವಿಂದ ಅವರು ಅಪ್ಪುಗೆಯ ಮೂಲಕ ಸ್ವಾಗತಿಸಿದರು, ನಂತರ ಹಸ್ತಲಾಘವ ಮಾಡಿದರು.
ಫಹಾದ್ ನಂತರ ರಣವೀರ್ ಸಿಂಗ್ ಜೊತೆ ಕೈಕುಲುಕಿದರು ಮತ್ತು ಅವರು ಪರಸ್ಪರ ಅಪ್ಪಿಕೊಂಡರು. ರಣವೀರ್ ಮುಗುಳ್ನಗುತ್ತಲೇ ಸಂಭಾಷಣೆಯನ್ನೂ ಹಂಚಿಕೊಂಡಿದ್ದಾರೆ. ಗೋವಿಂದ ಕಪ್ಪು ಮತ್ತು ಗೋಲ್ಡನ್ ಉಡುಪಿನಲ್ಲಿ ಧರಿಸಿದ್ದರೆ, ರಣವೀರ್ ಕೆಂಪು ಬಣ್ಣದ ಸೂಟ್ ಅನ್ನು ಆರಿಸಿಕೊಂಡರು. ಕಾರ್ಯಕ್ರಮಕ್ಕಾಗಿ ಫಹಾದ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರು.
ಕಾರ್ಯಕ್ರಮದಲ್ಲಿ ಹೇಮಾ ಮಾಲಿನಿ, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ಜಾನ್ವಿ ಕಪೂರ್, ಶೆಹನಾಜ್ ಗಿಲ್, ಭೂಮಿ ಪೆಡ್ನೇಕರ್, ಸನ್ನಿ ಲಿಯೋನ್, ಮಾನುಷಿ ಛಿಲ್ಲರ್, ವಾಣಿ ಕಪೂರ್, ಮನೀಶ್ ಪಾಲ್, ರಾಖಿ ಸಾವಂತ್, ತಮನ್ನಾ ಸಿಂಗ್, ಭಾರತಿ, ಕನಿಕಾ ಭಾಟಿಯಾ , ಕಪೂರ್, ಶರ್ವರಿ ವಾಘ್, ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಮುಂತಾದವರು ಭಾಗವಹಿಸಿದ್ದರು..