Iran Anti Hijab Protest : ಹಿಜಬ್ ಕಳಚಿದ ರಾನಿ ನಟಿ ಅರೆಸ್ಟ್ – ವಿಡಿಯೋ ವೈರಲ್
ಇರಾನ್ ನಲ್ಲಿ ಆಂಟಿ ಹಿಜಬ್ ಪ್ರತಿಭಟನೆಯ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಇದೀಗ ಜನಪ್ರಿಯ ನಟಿಯರನ್ನ ಹಿಜಬ್ ಕಳಚಿದಕ್ಕಾಗಿ ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ..
ನಟಿಯೊಬ್ಬರು ಸಾರ್ವಜನಿಕವಾಗಿ ಹಿಜಬ್ ಅನ್ನು ತೆಗೆದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 16ರಂದು ಹಿಜಬ್ ಸರಿಯಾಗಿ ಧರಿಸದಕ್ಕೆ ಕುರ್ದಿಶ್ ಮೂಲದ 22 ವರ್ಷದ ಇರಾನಿಯನ್ ಯುವತಿ ಅಮಿನಿ (Mahsa Amini) ಯ ಮೇಲೆ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಆಕೆಯನ್ನ ಕೊಲೆ ಮಾಡಲಾಗಿತ್ತು..
ಆನಂತರವೇ ಹಿಜಬ್ ವಿರುದ್ಧ ಪ್ರತಿಭಟನಾ ಕಿಚ್ಚು ಭುಗಿಲೆದ್ದು ಇಲ್ಲಿವರೆಗೂ ಸಾಕಷ್ಟು ಸಾವು ನೋವುಗಳೇ ಸಂಭವಿಸಿದೆ.
ಇದೀಗ ಹಿಜಬ್ ಗಲಭೆಗೆ ಪ್ರಚೋದನೆ ಮತ್ತು ಬೆಂಬಲ ನೀಡಿ, ಮಾಧ್ಯಮದೊಂದಿಗೆ ಸಂವಹನ ನಡೆಸಿದ್ದಕ್ಕಾಗಿ 52 ವರ್ಷದ ನಟಿ ಹೆಂಗಮೆಹ್ ಘಜಿಯಾನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲೇ ನ್ಯಾಯಾಂಗ ತನಿಖೆಗೆ ಹಾಜರಾಗುವಂತೆ ತನಗೆ ಸಮನ್ಸ್ ಕಳುಹಿಸಲಾಗಿದ್ದು, ಕಡ್ಡಾಯವಾಗಿ ಹಿಜಬ್ ಕಳಚಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ನಟಿ ತಿಳಿಸಿದ್ದರು.
ಶಾಪಿಂಗ್ ಸ್ಟ್ರೀಟ್‍ನಲ್ಲಿ ಚಿತ್ರೀಕರಿಸಲಾದ ಈ ವೀಡಿಯೋದಲ್ಲಿ, ಘಜಿಯಾನಿ ಅವರು ಮಾತನಾಡದೇ ಕ್ಯಾಮೆರಾ ಮುಂದೆ ನಿಂತು ಹಿಂದೆ ತಿರುಗಿ ಕೂದಲನ್ನು ಗಂಟು ಹಾಕುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಜೊತೆಗೆ ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು. “ಈ ಕ್ಷಣದಿಂದ, ನನಗೆ ಯಾವಾಗ ಏನಾಗುತ್ತೊ ಗೊತ್ತಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇರಾನ್ ಜನರೊಂದಿಗೆ ಇರುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.