Kangana Ranaut : ಬಾಲಿವುಡ್ ಉಳಿಸಿದಕ್ಕೆ ಟಬುರನ್ನ ಹೊಗಳಿದ ‘ಕ್ವೀನ್’
ಸದ್ಯ ಯಾವುದಾದರೊಂದು ವಿಚಾರವಾಗಿ ಮಾತನಾಡುತ್ತಾ ಸುದ್ದಿಯಲ್ಲಿರುವ ಕಂಗನಾ ಇದೀಗ ಬಾಲಿವುಡ್ ಉಳಿಯುವುದಕ್ಕೆ ಟಬು ಕಾರಣ ಎಂದು ಹೊಗಳಿದ್ದಾರೆ..
Instagram Strory ಅಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಂಗನಾ , ಟಬು ತನ್ನ ಹಿಟ್ ಚಿತ್ರಗಳಾದ ಭೂಲ್ ಭುಲೈಯಾ 2 ಮತ್ತು ದೃಶ್ಯಂ 2 ಮೂಲಕ ಬಾಲಿವುಡ್ ಅನ್ನು ಉಳಿಸಿದ್ದಕ್ಕಾಗಿ ಹೊಗಳಿದ್ದಾರೆ..
ಈ ವರ್ಷ ಎರಡು ಹಿಂದಿ ಚಲನಚಿತ್ರಗಳು ಮಾತ್ರ ಕೆಲಸ ಮಾಡಿದೆ – ಭೂಲ್ ಭುಲೈಯಾ 2 ಮತ್ತು ದೃಶ್ಯಂ 2… ಮತ್ತು ಎರಡೂ ಚಿತ್ರಗಳಲ್ಲಿ ಸೂಪರ್‌ಸ್ಟಾರ್ ಟಬು ಜಿ ಅವರೇ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಹೈಲೇಟ್ ಆಗಿದ್ದಾಋಎ..
ಏಕಾಂಗಿಯಾಗಿ ಹಿಂದಿ ಚಲನಚಿತ್ರೋದ್ಯಮವನ್ನು ಉಳಿಸಿದ್ದಾರೆ. ಆಕೆಯ ಪ್ರತಿಭೆ ಮತ್ತು ಸ್ಥಿರತೆಯನ್ನು ಎಂದಿಗೂ ಪ್ರಶ್ನಿಸಲಾಗಿಲ್ಲ ಆದರೆ 50 ರ ಹರೆಯದಲ್ಲೂ ಇಷ್ಟು ಉತ್ತಮವಾಗಿ ಕಾಣುವುದು ಶ್ಲಾಘನೀಯವೆಂದಿದ್ದಾರೆ..
ಟಬು ಅವರ ಇತ್ತೀಚಿನ ಚಿತ್ರ ದೃಶ್ಯಂ 2, ಅಜಯ್ ದೇವಗನ್, ಶ್ರಿಯಾ ಸರನ್ ಮತ್ತು ಇಶಿತಾ ದತ್ತಾ ಸಹ ನಟಿಸಿದ್ದಾರೆ, ನವೆಂಬರ್ 18 ರಂದು ತೆರೆಗೆ ಬಂದಿತು. ಚಲನಚಿತ್ರದ ಕಲೆಕ್ಷನ್ ಪ್ರಸ್ತುತ 36.97 ಕೋಟಿ ರೂ.
ಅಂದ್ಹಾಗೆ ದೃಶ್ಯಂ 2 ಮಾಲಿವುಡ್ ನ ಅದೇ ಹೆಸರಿನ ಮೋಹನ್ ಲಾಲ್ ಅಭಿನಯದ ಸಿನಿಮಾ ಅನ್ನೋದನ್ನ ಗಮನಿಸಲೇಬೇಕು..