Nayana : ‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ಕೇಸ್..!!
ಕಾಮಿಡಿ ಕಿಲಾಡಿಗಳು ಶೋ ಮೂಲಕ ಬಹಳ ಜನಪ್ರಿಯತೆ ಗಳಿಸಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟಿ ನಯನಾ ವಿರುದ್ಧ ನಟ ಸೋಮಶೇಖರ್ ಜೀವ ಬೆದರಿಕೆ ಆರೋಪ ಮಾಡಿದ್ದು , ನಯನ ಫೋನ್ ಮೂಲಕ ಮಾತನಾಡಿರುವ ಆಡಿಯೋ ಕೂಡ ವೈರಲ್ ಗಿದೆ..
ಸೋಮಶೇಖರ್ ನಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಆದ್ರೆ ಅದರ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲೇ ಕುಳಿತು ಆಡಿಯೋ ಮಾಡಿ ಹರಿಬಿಟ್ಟಿದ್ದಾರೆ ನಯನಾ..
ನಯನಾ ವಿರುದ್ಧ ಬೆಂಗಳೂರಿನ ರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ಸೋಮಶೇಖರ್ ಪ್ರಕರಣ ದಾಖಲು ಮಾಡಿದ್ದಾರೆ.. ತಮಗೆ ಜೀವ ಬೆದರಿಕೆ ಹಾಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಸೋಮಶೇಖರ್ ದೂರು ನೀಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನವಾಗಿ 3 ಲಕ್ಷ ರೂಪಾಯಿ ಹಣ ಪಡೆದಿತ್ತು. ಈ ತಂಡದಲ್ಲಿ ಸೋಮಶೇಖರ್ ಕೂಡ ಇದ್ದ. ಈ ಹಣವನ್ನೆಲ್ಲಾ ಆತನ ಖಾತೆಗೆ ಹಾಕಲಾಗಿತ್ತು.. ಇದನ್ನ ತಂಡಕ್ಕೆ ಸಮನಾಗಿ ಹಂಚಬೇಕಾಗಿತ್ತು.. ಆದ್ರೆ ಹಂಚಿಕೆಯಾಗಿಲ್ಲದ ವಿಚಾರವಾಗಿಯೇ ನಯನಾ ಸೋಮಶೇಖರ್ ನಡುವೆ ಮನಸ್ತಾಪವಾಗಿದೆ..
ನಯನಾರ ಧ್ವನಿ ಎಂದು ಹೇಳಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಠಾಣೆಯಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಮಾತುಗಳು ಇವೆ.
ಈ ಬಗ್ಗೆ ಸೋಮಶೇಖರ್ ಮಾತನಾಡ್ತಾ ನಯನಾ ಆರೋಪ ಸುಳ್ಳು.. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ. ವಾಹಿನಿ ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಸೋಮಶೇಖರ್ ಹೇಳಿದ್ದಾರೆ.