Shine Shetty : ಸಕೃತ ನಾಗ್ ಜೊತೆಗಿನ ಮದುವೆ ಗಾಸಿಪ್ ಗೆ ಬ್ರೇಕ್..!!
ಬಿಗ್ ಬಾಸ್ 7 ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಕಿರುತೆರೆಯ ಖ್ಯಾತ ನಟಿ , ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ಗಮನ ಸೆಳೆದ ಸಕೃತ್ ನಾಗ್ ಇಬ್ಬರೂ ಪ್ರೀತಿಸುತ್ತಿದ್ದು ಶೀಘ್ರವೇ ಮದುವೆಯಾಗಲಿದ್ದಾರೆಂಬ ಸುದ್ದಿ ಸದ್ಯ ಸಾಕಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ..
ಆದ್ರೀಗ ವದಂತಿಗಳಿಗೆಲ್ಲಾ ಖುದ್ದು ನಟ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದು ನಮ್ಮಿಬ್ಬರ ಮದುವೆ ಸುದ್ದಿ ಸುಳ್ಳು.. ನಮ್ಮಿಬ್ಬರ ನಡುವೆ ಗಾಢವಾದ ಪರಿಚಯವೂ ಇಲ್ಲ, ನಮ್ಮಿಬ್ಬರ ನಡುವೆ ಸಂಪರ್ಕವೂ ಇಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ..
ಸುಕೃತ ಅವರು ಕಲಾವಿದೆ ಆಗಿರುವ ಕಾರಣ ನನಗೆ ಅವರ ಪರಿಚಯವಿದೆ. ಅಷ್ಟೇ ಹೊರತು ಅವರಿಗೂ, ನನಗೂ ಯಾವುದೇ ರೀತಿಯ ಸಂಪರ್ಕವಿಲ್ಲ , ನಾವು ಇದುವರೆಗೂ ಭೇಟಿ ಸಹ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..
ಅಲ್ಲದೇ ನಾನು ನನ್ನ ಕೆರಿಯರ್ ಬಗ್ಗೆ ಮಾತ್ರ ಯೋಚನೆ ಮಾಡ್ತಾ ಇದ್ದೇನೆ. ಇನ್ನಷ್ಟು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಕೊಂಡಿದ್ದೇನೆ. ಅದರ ಬಗ್ಗೆ ಮಾತ್ರ ನನ್ನ ಗುರಿ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.