Avatar 2 : ಟಿಕೆಟ್ ಬೆಲೆ 1000 ಕ್ಕಿಂತ ಮೇಲೆಯೇ..!!
ಅವತಾರ್ ಭಾಗ 1 ವಿಶ್ವಾದ್ಯಂತ ದು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಸಿನಿಮಾ…
ಈ ಸಿನಿಮಾಗೆ ಸಖತ್ ಕ್ರೇಜ್ ಇದೆ.. ಹೀಗಾಗಿಯೇ 13 ವರ್ಷಗಳ ನಂತರ ರಿಲೀಸ್ ಆಗ್ತಿರುವ ಸೀಕ್ವೆಲ್ ಗೆ ಈ ಪಾಟಿ ಡಿಮ್ಯಾಂಡ್ ಇದೆ..
ಅವತಾರ್ 2 ಟಿಕೆಟ್ ಗಳು ಬಹಳ ದುಬಾರಿಯೇ ಇದೆ.. 1000 ರೂ.ಗೂ ಅಧಿಕವೇ ಪ್ರೀ ಬುಕಿಂಗ್ ಟಿಕೆಟ್ ದರವಿದ್ರೂ ಕಂಪ್ಲೀಟ್ ಟಿಕೆಟ್ ಗಳೇ ಸೋಲ್ಡ್ ಔಟ್ ಆಗಿದೆ..
ಡಿಸೆಂಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು ಬಿಡುಗಡೆಗೆ ಇನ್ನೂ ಇಪ್ಪತ್ತಕ್ಕೂ ಹೆಚ್ಚಿನ ದಿನಗಳು ಇರುವಾಗಲೇ ಚಿತ್ರದ ಮುಂಗಡ ಬುಕಿಂಗ್ ವಿಶ್ವದ ಹಲವು ದೇಶಗಳಲ್ಲಿ ಆರಂಭವಾಗಿದೆ. ಚಿತ್ರ ಪ್ರೇಮಿಗಳೇ ತುಂಬಿರುವ ಭಾರತದಲ್ಲಿಯೂ ಮುಂಗಡ ಬುಕಿಂಗ್ ಅನ್ನು ವಿವಿಧ ನಗರಗಳಲ್ಲಿ ತೆರೆಯಲಾಗಿದೆ.
ಬೆಂಗಳೂರು, ಚೆನ್ನೈ, ದೆಹಲಿ, ಇಂದೋರ್, ಮುಂಬೈ, ಕೋಲ್ಕತ್ತಾ ಹಾಗೂ ಮುಂತಾದ ನಗರಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದ್ದು ಈಗಾಗಲೇ ಹಲವೆಡೆ ಡಿಸೆಂಬರ್ 16ರ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಇನ್ನು ಈ ಬಾರಿ 3ಡಿ, ಐಮ್ಯಾಕ್ಸ್ 3ಡಿ, 4 ಡಿಎಕ್ಸ್ 3ಡಿಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ..