Bollywood : ಭೋಲಾ , ಶೆಹ್ಜಾದಾ ಟೀಸರ್ ಗಳು ರಿಲೀಸ್..!! ಎರೆಡೂ ರೀಮೇಕ್ ಗಳೇ..!!
ಬಾಲಿವುಡ್ ಅಂದ್ರೆ ರೀಮೇಕ್… ರೀಮೇಕ್ ಅಂದ್ರೆ ಬಾಲಿವುಡ್… ರೀಮೇಕ್ ಇಲ್ದೇ ಹಿಟ್ ಆಗ್ತವೆ ಸಿನಿಮಾಗಳು ಅಂದ್ರೆ ಅದೊಂತರ ಮಿರಾಕಲ್ ಆಗ್ಬಿಟ್ಟಿದೆ ಈಗ..
ಇತ್ತೀಚಿನ ವರ್ಷಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ,ಬ್ರಹ್ಮಾಸ್ತ್ರ , ಭೂಲ್ ಭುಲಯ್ಯ ಬಿಟ್ರೆ ಇನ್ಯಾವ ಸಿನಿಮಾಗಳು ಕೂಡ ಹಿಟ್ ಅಲ್ಲ ಅವರೇಜ್ ಕೂಡ ಆಗಲಿಲ್ಲ.. ಸ್ಟಾರ್ ಗಳ ಸಿನಿಮಾಗಳೇ ಡಿಸಾಸ್ಟರ್ ಆಗಿವೆ..
ಸದ್ಯಕ್ಕೆ ಬಾಲಿವುಡ್ ನ ಜೀವ ಉಳಿಸುತ್ತಿರುವುದು ಮಾಲಿವುಡ್ ನ ದೃಶ್ಯಂ 2 ಸಿನಿಮಾದ ಅದೇ ಹಸೆರಿನ ರೀಮೇಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ..
ಇದು ರೀಮೇಕ್ ಸಿನಿಮಾ ಅನ್ನೋದು ಗೊತ್ತಿದೆ.. ಇನ್ನೂ ಮುಂದೆ ಬಾಲಿವುಡ್ ನಲ್ಲಿ ಸಾಕಷ್ಟು ಸೌತ್ ಸಿನಿಮಾಗಳ ರೀಮೇಕ್ ವರ್ಷನ್ ಗಳು ಬರಲಿದೆ..
ಇತ್ತೀಚೆಗೆ ಅಜಯ್ ದೇವಗನ್ ನಟನೆಯ ಭೋಲಾ , ಕಾರ್ತಿಕ್ ಆರ್ಯನ್ ಶೆಹಜಾದಾ ಟೀಸರ್ ರಿಲೀಸ್ ಆಗಿ ಸೌಂಡ್ ಮಾಡ್ತಿವೆ.. ಆದ್ರೆ ಈ ಎರೆಡೂ ಸಿನಿಮಾಗಳೂ ಕೂಡ ಸೌತ್ ಸಿನಿಮಾಗಳ ರೀಮೇಕ್ ಆಗಿದೆ.. ಭೋಲಾ ತಮಿಳಿನ ಕಾರ್ತಿ ಖೈದಿ ಸಿನಿಮಾದ ರೀಮೇಕ್ ಆದ್ರೆ , ಶೆಹಜಾದಾ ಅಲ್ಲು ಅರ್ಜುನ್ ನಟನೆಯ ತೆಲುಗಿನ ಅಲಾ ವೈಕುಂಠಪುರಂಲೋ ಸಿನಿಮಾದ ರೀಮೇಕ್ ಆಗಿದೆ..
ಇದ್ರಿಂದಾಗಿ ಬರೀ ಕಾಪಿ ಸಿನಿಮಾಗಳನ್ನೇ ಮಾಡ್ತಿರುವ ಬಾಲಿವುಡ್ ಬಗ್ಗೆ ಟೀಕೆಗಳೂ ಕೂಡ ವ್ಯಕ್ತವಾಗ್ತಿದೆ..
ಅಂದ್ಹಾಗೆ ಇವೆರೆಡೂ ಟೀಸರ್ ಗಳು ಕೂಡ ಅದರ ೊರಿಜಿನಲ್ ವರ್ಷನ್ ಸಿನಿಮಾಗಳಿಗಿಂತ ವಿಭಿನ್ನವಾಗಿದ್ದು ಮತ್ತಷ್ಟು ಟೀಕೆಗಳು ವ್ಯಕ್ತವಾಗ್ತಿದೆ..