jaya jaya jaya hey : ಸಿನಿಮಾ ನೋಡಿ ಪತಿಗೆ ಮನಸೋ ಇಚ್ಛೆ ಥಳಿಸಿದ ಪತ್ನಿ..!!!
ಮಲಯಾಳಂನಲ್ಲಿ ಸಖತ್ ಸೌಂಡ್ ಮಾಡ್ತಿರುವ ಜಯ ಜಯ ಜಯ ಜಯ ಹೇ ಸಿನಿಮಾದಿಂದ ಸ್ಪೂರ್ತಿ ಪಡೆದ ಮಹಿಳೆಯೊಬ್ಬಳು ತನ್ನ ಪತಿಯನ್ನ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ನಡೆದಿದೆ.. ಈ ಸಿನಿಮಾದಲ್ಲಿ ಮಹಿಳಾಪರ ಧ್ವನಿಯೆತ್ತುವ ಕಥಯಿದೆ..
ಈ ಸಿನಿಮಾದ ನಾಯಕ ನಟ, ಬಾಸಿಲ್ ಜೋಸೆಫ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಸಿನಿಮಾ ನೋಡಿ, ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದರು ಎಂದಿದ್ದಾರೆ.. ನಾನು ವ್ಯಕ್ತಿಯ ಹೆಸರು ಹೇಳುವುದಿಲ್ಲ, ಆದರೆ ಸಿನಿಮಾ ನೋಡಿದ ಮಹಿಳೆಯೊಬ್ಬರು ತನ್ನ ಪತಿಯನ್ನು ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ನಡೆದಿದೆ. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ ಎಂದಿದ್ದಾರೆ.
ಜಯ ಜಯ ಜಯ ಹೇ, ಹಿಂದಿಯ ಡಾರ್ಲಿಂಗ್ಸ್ ರೀತಿಯ ಕಮರ್ಷಿಯಲ್ ಸಿನಿಮಾಗಳ ಶಕ್ತಿಯೆಂದರೆ ಅವು ವ್ಯಂಗ್ಯವಾಗಿ ನಿಜವನ್ನು ಪ್ರಸ್ತುತಿ ಪಡಿಸುತ್ತವೆ. ಇವು ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ನನಗೆ ಹಲವು ಕರೆಗಳು ಬರುತ್ತವೆ, ಎಷ್ಟೋ ಮಂದಿ ಪೋಷಕರು ಕರೆ ಮಾಡಿ, ಮಗಳನ್ನು ಈಗಾಗಲೇ ಕರಾಟೆ ಕ್ಲಾಸ್ ಗೆ ಸೇರಿಸಿದ್ದೇವೆ ಎಂದು ಹೇಳುತ್ತಾರೆ. ಈಗಿನ ಪೀಳಿಗೆಯ ಹೆಣ್ಣು ಮಕ್ಕಳಿಗೆ ಇದು ಅವಶ್ಯಕ ಸಹ ಎಂದಿದ್ದಾರೆ.
ನನಗೆ ಸಾಕಷ್ಟು ಮಹಿಳೆಯರ ಕರೆಗಳು ಬರುತ್ತವೆ. ಸಿನಿಮಾ ನೋಡುತ್ತಿದ್ದರೆ ನನ್ನದೇ ಕತೆ ಎನಿಸುತ್ತದೆ ಎಂದು ಹೇಳುತ್ತಾರೆ. ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ನಾನು ಭೇಟಿ ನೀಡಿದಾಗ ನನಗೇ ಆಶ್ಚರ್ಯವಾಗುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಿನಿಮಾಕ್ಕೆ ಬರುತ್ತಿದ್ದಾರೆ. ಸಿನಿಮಾ ನೋಡುವಾಗ ಹಾಡು-ಡ್ಯಾನ್ಸ್ ಮಾಡುತ್ತಾ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದಿದ್ದಾರೆ.
ವಿಪಿನ್ ದಾಸ್ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ದರ್ಶನಾ ರಾಜೇಂದ್ರ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.