Kamal Hassan : ಲೆಜೆಂಡ್ ನಟನ ವಿರುದ್ಧ ಬಿಗ್ ಬಾಸ್ ಮಾಜಿ ಸ್ಪರ್ಧಿ ಗಂಭೀರ ಆರೋಪ..!!
ಎಲ್ಲಾ ಭಾಷೆಗಳಲ್ಲೂ ಸಖತ್ ಕ್ರೇಜ್ ಇರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್.. ತಮಿಳಿನಲ್ಲಿ ಕಮಲ್ ಹಾಸನ್ ನಡೆಸಿಕೊಡುವ ಈ ಶೋಗೂ ಅಷ್ಟೇ ಕ್ರೇಜ್ ಇದೆ..
ಇದೀಗ ಕಮಲ್ ಹಾಸನ್ ವಿರುದ್ಧ ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮಿಳು ಬಿಗ್‌ಬಾಸ್ ಸೀಸನ್ ಆರು ಪ್ರಸ್ತುತ ಚಾಲ್ತಿಯಲ್ಲಿದೆ.. ಸದ್ಯ ಸೀಸನ್ ನಿಂದ 7 ಜನ ಆಗಾಗಲೇ ಎಲಿಮಿನೇಟ್ ಆಗಿದ್ದಾರೆ..
ಈ ನಡುವೆ ಮಾಜಿ ಬಿಗ್ ಬಾಸ್ ಸ್ಪರ್ಧಿ ವನಿತಾ ಕಮಲ್ ಹಾಸನ್ ವಿರುದ್ಧ ಗಂಭೀರ ಆರೋಪವನ್ನ ಮಾಡಿದ್ದಾರೆ..
ತಮಿಳು ಬಿಗ್ ಬಾಸ್ ನ ಮೂರನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ವನಿತಾ ವಿಜಯ್ ಕುಮಾರ್, ಪ್ರಸ್ತುತ ಪ್ರಸಾರವಾಗುತ್ತಿರುವ ಆರನೇ ಸೀಸನ್ ನಲ್ಲಿ ಕಮಲ್ ಹಾಸನ್ ಸ್ಪರ್ಧಿ ಅರ್ಚನಾ ಪರವಾಗಿದ್ದಾರೆ ಎಂದು ಆರೋಪಿಸಿದ್ದಾರೆ..
ಅರ್ಚನಾರ ತಪ್ಪುಗಳನ್ನು ಬೇಕೆಂದೇ ನಿರ್ಲಕ್ಷ್ಯ ಮಾಡಿ ಬೇರೆ ಸ್ಪರ್ಧಿಗಳ ಬಗ್ಗೆ ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಕಳೆದ ವಾರದ ವಾರಾಂತ್ಯದ ಎಪಿಸೋಡ್ ಬಗ್ಗೆ ಮಾತನಾಡುತ್ತಾ, ಅಜೀಮ್ ಚೆನ್ನಾಗಿ ಆಡುತ್ತಿದ್ದಾನೆ. ಗೇಮ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆತ ಈಗ ಕಮಲ್ ಹಾಸನ್ ಅವರಿಗೆ ಎದುರಾಗಿ ನಿಂತಿಬಿಟ್ಟಿದ್ದಾನೆ. ಆದರೆ ಅದನ್ನು ಜನ ಹೇಗೆ ಸ್ವೀಕಾರ ಮಾಡುತ್ತಾರೋ ನೋಡಬೇಕು ಎಂದಿದ್ದಾರೆ.
ರಾಬರ್ಟ್ ಹಾಗೂ ರಚಿತಾ ನಡುವೆ ನಡೆದ ಘಟನೆ ಬಗ್ಗೆ ಕಮಲ್ ಹಾಸನ್ ಏಕೆ ಮಾತನಾಡಲಿಲ್ಲವೊ ನನಗೆ ಗೊತ್ತಿಲ್ಲ. ರಾಬರ್ಟ್, ಗಂಭೀರ ವಿಷಯವನ್ನೂ ಸಹ ನಗುತ್ತಲೇ ಹೇಳಿದ. ಆದರೆ ಕಮಲ್ ಹಾಸನ್, ರಚಿತಾಗೆ ಕಠಿಣವಾಗಿ ಎಚ್ಚರಿಕೆ ಕೊಡುವ ಬದಲು ಅವರೂ ಸಹ ರಾಬರ್ಟ್ ಜೊತೆ ಸೇರಿಕೊಂಡು ನಗುತ್ತಿದ್ದರು. ರಚಿತಾ ಬಗ್ಗೆ ಏಕೆ ಹೀಗೆ ಪಕ್ಷಪಾತ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆಕೆ ದೀವಟಿಗೆ ಹಿಡಿದ ಪವಿತ್ರ ಮಹಿಳೆ ಎಂಬಂತಾಗಿದೆ.
ಯಾರೂ ಆಕೆಯ ವಿರುದ್ಧ ಮಾತನಾಡುತ್ತಿಲ್ಲ. ಕಮಲ್ ಹಾಸನ್ ಸಹ ಅವಳ ಅಭಿಮಾನಿಯಂತೆ ಆಡುತ್ತಾರೆ. ಅದು ಅವರ ವೈಯಕ್ತಿಕ ವಿಷಯ.. ಆದರೆ ಗೇಮ್ ನಲ್ಲಿ ಹಾಗೆ ಮಾಡುವಂತಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ.. ಇದು ಬಿಗ್‌ಬಾಸ್ ಆಯೋಜಕರ ಸ್ಟ್ರಾಟೆಜಿ ಸಹ ಆಗಿರಬಹುದು. ರಚನಾ ಮಾಡಿದ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಅವರೇ ಕಮಲ್ ಹಾಸನ್ ಗೆ ಸೂಚನೆ ಕೊಟ್ಟಿರಲೂ ಬಹುದು. ತೆರೆಯ ಹಿಂದೆ ಏನೇನು ನಡೆಯುತ್ತದೆಯೋ ನಮಗೆ ಗೊತ್ತಾಗುವುದಿಲ್ಲ ಎಂದಿದ್ದಾರೆ.