Naveen D Padil : ಖ್ಯಾತ ತುಳು ನಟ ನವೀನ್ ಡಿ ಪಡಿಲ್ ಆಸ್ಪತ್ರೆಗೆ ದಾಖಲು…
ತುಳು ಸಿನಿಮಾರಂಗದಲ್ಲಿ ಸಖತ್ ಫೇಮಸ್ಆಗಿರುವ ಸ್ಯಾಂಡಲ್ ವುಡ್ ನಲ್ಲೂ ಗುರುತಿಸಿಕೊಂಡಿರುವ ನಟ ನವೀನ್ ಡಿ ಪಡಿಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ..
ಸಿನಿಮಾದ ಚಿತ್ರೀಕರಣ ವೇಳೆ ಬಿದ್ದು ಏಟು ಮಾಡಿಕೊಂಡ ಪರಿಣಾಮ ಅವರ ತೊಡೆಯ ಮೂಳೆ ಮುರಿತವಾಗಿದ್ದು, ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಸದ್ಯ ಅವರು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ನಡೆದ ಶೂಟಿಂಗ್ ನಲ್ಲಿ ಅವರು ಪಾಲ್ಗೊಂಡಿದ್ದರು. ಶೂಟಿಂಗ್ ವೇಳೆ ಬಿದ್ದ ಪರಿಣಾಮ ಬಲವಾಗಿಯೇ ತೊಡೆಗೆ ಏಟಾಗಿದೆ. ಹಾಗಾಗಿ ತೊಡೆ ಮೂಳೆ ಮುರಿತವಾಗಿದೆ.