Samanatha : ಸಮಂತಾಗೆ ಅಪರೂಪದ ಕಾಯಿಲೆ – ಶ್ರಿಯಾ ಶರಣ್ ಮಾತು..!!
ಬಹುಭಾಷಾ ನಟಿ ಶ್ರಿಯಾ ಶರಣ್ ಅವರ ನಟನೆಯ ರೀಮೇಕ್ ಹಿಂದಿ ಸಿನಿಮಾ ದೃಶ್ಯಂ 2 ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ..
ಇದೀಗ ಶ್ರಿಯಾ ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ಬಗ್ಗೆ ಮಾತನಾಡಿದ್ದಾರೆ..
ಅವರಿಗಿರುವ ಅಪರೂಪದ ಕಾಯಿಲೆ ಬಗ್ಗೆ ಮಾತನಾಡ್ತಾ ಸಂದರ್ಶನವೊಂದ್ರಲ್ಲಿ ನಟಿ ಸಮಂತಾಗೆ ಶುಭ ಹಾರೈಸಿದ್ದಾರೆ.
ಸಮಂತಾ ಅವರನ್ನು ಸ್ಟ್ರಾಂಗ್ ಗರ್ಲ್ ಎಂದು ಕರೆದಿದ್ದಾರೆ..
“ಅವರು (ಸಮಂತಾ) ಒಬ್ಬ ಗಟ್ಟಿಗಿತ್ತಿ ಹುಡುಗಿ ಮತ್ತು ಒಳಗೆ ಸುಂದರ ಹುಡುಗಿ. ನಾನು ಸಮಂತಾಗೆ ಶುಭ ಹಾರೈಸುತ್ತೇನೆ. ಅವರು ತುಂಬಾ ಪ್ರತಿಭಾವಂತರು. ಇದು ಹಾದು ಹೋಗುವ ಹಂತವಾಗಿದೆ. ಅವರು ಬಲಶಾಲಿಯಾಗಿ ಹೊರಬರುತ್ತಾರೆ” ಎಂದಿದ್ದಾರೆ..