Upendra : ‘ಹುಷಾರ್’ ಚಿತ್ರದ ಹಾಡಿಗೆ ಧ್ವನಿಯಾದ ಉಪ್ಪಿ..!!
ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ, ಗಾಯನ , ನಟನೆ ಎಲ್ಲದಕ್ಕೂ ಸೈ.. ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಉಪ್ಪಿ ಆಗಾಗ ಅನೇಕ ಸಿನಿಮಾಗಳಿಗೆ ಹಾಡುತ್ತಾ , ಹೊಸಬರ ಸಿನಿಮಾಗಳ ಹಾಡಿಗೂ ಧ್ವನಿಯಾಗುತ್ತಾ ಪ್ರೋತ್ಸಾಹಿಸುತ್ತಾರೆ..
ಇದೀಗ “ಹುಷಾರ್” ಸಿನಿಮಾದ “ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ” ಹಾಡಿಗೆ ಧ್ವನಿಯಾಗಿದ್ದಾರೆ.. ಈ ಹಾಡು ಎರೆಡು ದಿನಗಳ ಹಿಂದೆ A2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದು , ಸಖತ್ ಸೌಂಡ್ ಮಾಡ್ತಿದೆ.. ಉಪ್ಪಿ ಧ್ವನಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
ಸತೀಶ್ ರಾಜ್ ಮೂವಿ ಮೇಕರ್ಸ್ ಲಾಂಛನದಲ್ಲಿ, ಸತೀಶ್ ರಾಜ್ ಕಥೆ- ಚಿತ್ರಕಥೆ -ಸಾಹಿತ್ಯ ಸಂಭಾಷಣೆ- ರಚಿಸಿ -ನಿರ್ಮಿಸಿ- ನಿರ್ದೇಶಿಸಿರುವ ಸಿನಿಮಾ ಹುಷಾರ್..
ಉಪೇಂದ್ರ ಹಾಗೂ ಜಾಹ್ನವಿ ಆನಂದ್ ಹಾಡಿರುವ ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ.
ಈ ಸಿನಿಮಾದಲ್ಲಿ ಸಿದ್ದೇಶ್ ನಾಯಕನಾಗಿ ನಟಿಸಿದ್ದಾರೆ. ಆದ್ಯಪ್ರಿಯ, ರಚನ ಮಲ್ನಾಡ್, ವಿನೋದ್, ಡಿಂಗ್ರಿ ನಾಗರಾಜ್, ಗಣೇಶ್ ರಾವ್, ಸತೀಶ್ ರಾಜ್, ಪುಷ್ವ ಸ್ವಾಮಿ, ಲಯ ಕೋಕಿಲ, ಪವಿತ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ..