kranthi : ಕ್ರಾಂತಿ ಥೀಮ್ ಸಾಂಗ್ “ಧರಣಿ” ರಿಲೀಸ್ ಗೆ ಡೇಟ್ ಫಿಕ್ಸ್… ಯಾವಾಗ..??
ವಿ. ಹರಿಕೃಷ್ಣ ಮೊದಲ ಭಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರತಂಡದಿಂದ್ ಬಿಗ್ ಅಪ್ಡೇಟ್ ಸಿಕ್ಕಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕಾಂತ್ರಿ ಚಿತ್ರದ ಥೀಮ್ ಸಾಂಗ್ ಧರಣಿ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ಇದೇ ಡಿಸೆಂಬರ್ 10ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ.
ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಸಾಂಗ್ ಬಿಡುಗಡಯಾಗಲಿದೆ. ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್ ಆಲ್ಬಮ್ಗಳೆಲ್ಲ ಹಿಟ್ ಆಗಿರುವ ಕಾರಣ ಇದೀಗ ಕ್ರಾಂತಿ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.
10ನೇ ತಾರೀಖು ನಾವು ಮೈಸೂರಿಗೆ ಬರ್ತೀವಿ. ನಮ್ಮ ಇಡೀ ಚಿತ್ರತಂಡ ಜೊತೆಗೆ ಇರುತ್ತದೆ. ಆದರೆ ಒಂದು ವಿಶೇಷ ಏನಂದರೆ ನಾನು ಅಂದು ನಾಯಕ ನಟನಾಗಿ ನಿಮ್ಮ ಮುಂದೆ ಬರುವುದಿಲ್ಲ. ಒಬ್ಬ ನಿರೂಪಕನಾಗಿ ಬರ್ತೀನಿ. ನೀವು ಬನ್ನಿ ನಿಮ್ಮ ‘ಕ್ರಾಂತಿ’ ಚಿತ್ರದ ಮೊದಲ ಹಾಡನ್ನು ನೀವೇ ಬಿಡುಗಡೆ ಮಾಡಿ” ಎಂದು ದರ್ಶನ್ ಮನವಿ ಮಾಡಿದ್ದಾರೆ.
ಧರಣಿ ಕ್ರಾಂತಿ ಚಿತ್ರದ ಥೀಮ್ ಸಾಂಗ್ ಆಗಿದ್ದು, ನಾಗೇಂದ್ರ ಪ್ರಸಾದ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಾಣದಲ್ಲಿ ಮೂಡಿಬರುತ್ತಿವರ ಕ್ರಾಂತಿ ಚಿತ್ರದಲ್ಲಿ ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ, ಸಂಯುಕ್ತ ಹೊರ್ನಾಡ್ ಮತ್ತು ವೈನಿಧಿ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.