KGF 3 ಟ್ರೆಂಡಿಂಗ್ ಆಗ್ತಿರೋದ್ಯಾಕೆ..?? ಪಾಂಡ್ಯ ಬ್ರದರ್ಸ್ ಮೀಟ್ ಮಾಡಿದ ರಾಕಿ ಭಾಯ್..!! ಕನೆಕ್ಷನ್ ಏನು..??
ರಾಕಿಂಗ್ ಸ್ಟಾರ್ ಯಶ್ ಅವರು KGF ನಂತರ ನ್ಯಾಷನಲ್ ಸ್ಟಾರ್ ಆಗಿದ್ದಾರೆ.. ಅವರ ಮುಂದಿನ ಸಿನಿಮಾ #Yash19 ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ..
ಈ ನಡುವೆ KGF 3 ಟ್ರೆಂಡ್ ಆಗಲು ಆರಂಭವಾಗಿದೆ.. ಇದಕ್ಕೆ ಕಾರಣ ಯಶ್ ಇತ್ತೀಚೆಗೆ ಟೀಮ್ ಇಂಡಿಯಾ ಆಟಗಾರರಾಗಿರುವ ಪಾಂಡ್ಯ ಬ್ರದರ್ಸ್ ಭೇಟಿ ಮಾಡಿದ್ದಾರೆ.. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯಾರನ್ನ ರಾಕಿ ಭಾಯ್ ಭೇಟಿಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ..
ಅಲ್ದೇ ಮತ್ತೆ KGF 3 ಎಂದು ಟ್ರೆಂಡ್ ಶುರುವಾಗಿದೆ..
ಯಶ್ ಜೊತೆಗೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಇಬ್ಬರು ಫೋಟೋ ತೆಗೆಸಿಕೊಂಡಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 3 ಎಂದು ಬರೆದುಕೊಂಡು ಹಾರ್ದಿಕ್ ಪೋಸ್ಟ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪೋಸ್ಟ್ ಮಾಡುತ್ತಿದ್ದಂತೆ ಕೆಜಿಎಫ್ 3 ಟ್ರೆಂಡಿಂಗ್ ಆಗಿದೆ.
KGF 3 trending after yash meets pandya brothers