Yash : ” ಕ್ಷಮಿಸಿ ಈ ಬಾರಿ ಹುಟ್ಟಹಬ್ಬಕ್ಕೆ ನಿಮ್ಮೊಂದಿಗಿರಲು ಸಾಧ್ಯವಿಲ್ಲ , ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪ ಸಮಯ ಕೊಡಿ”
ಜನವರಿ 7 ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ.. KGF 2 ನಂತರ ದೇಶದ ಮೂಲೆ ಮೂಲೆಯಲ್ಲಿ ರಾಮಕಿ ಭಾಯ್ ಕ್ರೇಜ್ ಇದೆ.. ಅಭಿಮಾಣಿಗಳಿದ್ದಾರೆ..
ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಅವರ ಹುಟ್ಟುಹಬ್ಬ ಆಚರಣೆಗೆ ಅಭಿಮಾಣಿ ಬಳಗಗಳು ನಾನಾ ಪ್ಲಾನ್ ಮಾಡಿಕೊಳ್ತಿದ್ದು , ಇತ್ತ ರಾಕಿ ಭಾಯ್ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಲು , ಅವರನ್ನ ಭೇಟಿಯಾಗಲು
ಅನೇಕರು ಕಾಯುತ್ತಿದ್ದಾರೆ..
ಆದ್ರೆ ಅವರಿಗೆ ಈ ಬಾರಿ ನಿರಾಸೆಯಾಗಲಿದೆ.. ಯಶ್ ಅವರು ತಮ್ಮ ಅಭಿಮಾನಿಗಳಿಗೊಂದು ಪ್ರೀತಿಯ ಪತ್ರ ಬರೆದಿದ್ದು , ನಾನು ಈ ಬಾರಿ ನಮ್ಮ ಜೊತೆಗಿರಲು ಸಾಧ್ಯವಿಲ್ಲ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ..
ಹೌದು..!!
ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿರುವ ಯಶ್ , ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಒಂದೆಡೆ ಯಶ್ ಭೇಟಿಗೆ ಅವಕಾಶ ಸಿಗಲ್ಲ ಎಂದು ತಿಳಿದು ಅಭಿಮಾನಿಗಳು ನಿರಾಸೆಗೊಂಡಿದ್ದರೂ , Yash19 ಅಪ್ ಡೇಟ್ ಸಿಗಲಿದೆ ಎಂಬ ಕ್ಯೂರಿಯಾಸಿಟಿಯಲ್ಲಿ ಎಕ್ಸೈಟ್ ಆಗಿದ್ದಾರೆ..
ಯಶ್ ಬರೆದ ಪತ್ರದಲ್ಲೇನಿದೆ..??
“ ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ.. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನುಅರ್ಥಪೂರ್ಣವಾಗಿಸುತ್ತೇನೆ” ನಿಮ್ಮ ಪ್ರೀತಿಯ ಯಶ್- ಎಂದು ಬರೆದುಕೊಂಡಿದ್ದಾರೆ..
ಅಂದ್ಹಾಗೆ ಈಗಾಗಲೇ ಯಶ್ ಅವರ ಕಾಮನ್ ಡಿಪಿ ಸಿದ್ಧಪಡಿಸಿ ವೈರಲ್ ಮಾಡಿದ್ದಾರೆ ಫ್ಯಾನ್ಸ್. ಇತ್ತ ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಗೆ ಭರ್ಜರಿ ಗಿಫ್ಟ್ ಕೊಡಲು ರಾಕಿ ಭಾಯ್ ಕೂಡ ತಯಾರಿ ಮಾಡಿಕೊಳ್ತಿರೋ ಹಾಗೆ ಕಾಣ್ತಿದೆ..
View this post on Instagram