RRR : ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಸಾಧನೆ ಮಾಡಿದ RRR
ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ಅಭಿನಯದ ರಾಜಮೌಳಿ ನಿರ್ದೇಶನದ RRR ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಟಾಲಿವುಡ್ ನಿಂದ ಹಾಲಿವುಡ್ ವರೆಗೂ ಈ ಚಿತ್ರ ಹಲವು ಪ್ರಶಸ್ತಿಗಳ ಬಾಚಿಕೊಂಡಿದೆ. ವಿಶ್ವದಾದ್ಯಂತ ಹೊಸ ದಾಖಲೆಗಳನ್ನ ಸೃಷ್ಟಿಸಿರುವ ಈ ಚಿತ್ರ ಇದೀಗ ಅಂತರಾಷ್ಟ್ರೀಯ ಮಟ್ಟದ ಮತ್ತೊಂದ್ದು ಪ್ರಶಸ್ತಿಯನ್ನ ಗೆದ್ದು ಬೀಗಿದೆ.
ಇತ್ತೀಚೆಗೆ RRR ಚಿತ್ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು, ಇದು ಹಾಲಿವುಡ್ ನಲ್ಲಿ ಆಸ್ಕರ್ ನಂತರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಇದರ ಪ್ರಶಸ್ತಿ ಸಮಾರಂಭ ಇಂದು ಬೆಳಿಗ್ಗೆ ನಡೆಯಿತು. RRR ಚಿತ್ರದ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ಸ್ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಪ್ರಶಸ್ತಿಯನ್ನ ಸಂಗೀತ ನಿರ್ದೇಶಕ ಕೀರವಾಣಿ ಸ್ವೀಕರಿಸಿದರು. ಪ್ರಶಸ್ತಿಗೆ ಹೆಸರು ಘೋಷಣೆಯಾದ ಇಡೀ ಚಿತ್ರತಂಡ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿತು.
ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ಎಆರ್ ರೆಹಮಾನ್ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನ ಪಡೆದ ಮೊದಲ ಭಾರತೀಯರಾಗಿ ಇತಿಹಾಸ ಸೃಷ್ಟಿಸಿದ್ದರು. ಇದೀಗ RRR ಚಿತ್ರಕ್ಕಾಗಿ ನಾಮ ನಿರ್ದೇಶನಗೊಂಡು ಭಾರತದಿಂದ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದ ಎರಡನೇ ವ್ಯಕ್ತಿಯಾಗಿ ಕೀರವಾಣಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
RRR , Ramcharan , Junio NTR , cinibazaar , golen globe award