KGF 2 : ಯಾಕೆ ಆಸ್ಕರ್ ನಾಮಿನೇಷನ್ ಗೆ ಆಯ್ಕೆಯಾಗಿಲ್ಲ..??
ಈ ವರ್ಷ ಕನ್ನಡ ಸಿನಿಮಾರಂಗ ಅಷ್ಟೇ ಅಲ್ದೇ ಭಾರತದಾದ್ಯಂತ ಬಾಕ್ಸ್ ಆಫೀಸ್ ಲೂಟಿ ಮಾಡಿದ ಕನ್ನಡದ ಬ್ಲಾಕ್ ಬಾಸ್ಟರ್ ಸೂಪರ್ ಹಿಟ್ ಸಿನಿಮಾಗಳು ಕಾಂತಾರ , ವಿಕ್ರಾಂತ್ ರೋಣ , KGF 2…
ಈ ಸಿನಿಮಾಗಳೂ ಕೂಡ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಅಬ್ಬರಿಸಿ ಹೊಸ ಸೆನ್ಷೇಷನ್ ಹುಟ್ಟುಹಾಕಿವೆ.. ಹೊಸ ಹೊಸ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿವೆ..
ಅಂದ್ಹಾಗೆ ಕಾಂತಾರ ಹಾಗೂ KGF 2 ಎರೆಡೂ ಸಿನಿಮಾಗಳಿಗೂ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದು , ಎರೆಡೂ ಬೇರೆ ಬೇರೆ ಜಾನರ್ ನ ಸಿನಿಮಾಗಳಾಗಿವೆ..
ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ನಾಮಿನೇಷನ್ ಗೆ ಕ್ವಾಲಿಫೈ ಆಗಿದೆ.. ಅಷ್ಟೇ ಅಲ್ಲ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಕೂಡ ಆಸ್ಕರ್ ರೇಸ್ ಗೆ ನಾಮಿನೇಷನ್ ಗೆ ಆಯ್ಕೆಯಾಗಿದೆ..
ಆದ್ರೆ ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2 ನೇ ಸಿನಿಮಾವೆಂಬ ಹೆಗ್ಗಳಿಕೆ ಹೊಂದಿರು KGF 2 ಸಿನಿಮಾ ಯಾಕೆ ಆಸ್ಕರ್ ಗೆ ನಾಮಿನೇಟ್ ಆಗಿಲ್ಲ ಇಂದು ಇದೀಗ ಪ್ರಶ್ನೆಗಳು ಉದ್ಭವವಾಗಿದೆ.. ಚರ್ಚೆಗಳು ನಡೆಯುತ್ತಿವೆ..
ನೆಟ್ಟಿಗರು ಈಗ ಈ ವಿಚಾರವನ್ನು ಚರ್ಚೆ ಮಾಡುತ್ತಿದ್ದಾರೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಸಿನಿಮಾದ ಹೊಸ ದಾಖಲೆಯನ್ನು ಕನ್ನಡ ಸಿನಿಪ್ರೇಮಿಗಳು ಕೊಂಡಾಡುತ್ತಿದ್ದಾರೆ. ಅದರ ಜೊತೆಗೇ ಲಿಸ್ಟ್ನಲ್ಲಿ ಕೆಜಿಎಫ್ ಯಾಕಿಲ್ಲ ಎಂದು ಚರ್ಚೆ ಮಾಡುತ್ತಿದ್ದಾರೆ.
ಹಾಗೆ ನೋಡಿದ್ರೆ , ಅಂಡಲ್ ವರ್ಲ್ಡ್ ಕಥೆ KGF 2 ನಲ್ಲಿ ಆಸ್ಕರ್ ಪ್ರವೇಶ ಮಾಡುವ ಲಾಜಿಕ್ ಆಗ್ಲಿ ಕಥೆಯಾಗ್ಲಿ ಇಲ್ಲ ಎಂದು ನೆಟ್ಟಿಗರು ಮಾತನಾಡಿದ್ದಾರೆ..
ಅಲ್ಲದೇ ಇದು ಪ್ಯೂರ್ಲಿ ಕಮರ್ಷಿಯಲ್ ಸಿನಿಮಾ.. ಆದ್ರೆ ಕಾಂತಾರ ಕಂಟೆಂಟ್ ಬೇಸ್ಡ್ , ಸಂಸ್ಕೃತಿ ಸಾರುವ ಕಥೆಯಾಧಾರಿತ ಕಮರ್ಷಿಯಲ್ ಸಿನಿಮಾ…
ಈ ಸಿನಿಮಾದಲ್ಲಿ ಮೆಸೇಜ್ ಇದೆ, ಲಾಜಿಕ್ ಇದೆ , ಜನರಿಗೆ ಇಷ್ಟವಾಗುವ ಎಲಿಮಿಂಟ್ ಕೂಡ ಇದೆ.. ಹೀಗಾಗಿಯೇ ಇದು ಆಸ್ಕರ್ ಗೆ ನಾಮಿನೇಟ್ ಆಗಿದೆ ಅನ್ನೋದು ನೆಟ್ಟಿಗರ ಮಾತು..
ಅಷ್ಟೇ ಅಲ್ಲ ಆಸ್ಕರ್ ನಾಮಿನೇಷನ್ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಹೊಂಬಾಳೆ ಫಿಲ್ಮ್ಸ್ ಕಾಂತಾರ ಸಿನಿಮಾಗಾಗಿ ಅರ್ಜಿ ಸಲ್ಲಿಸಿದೆ. ಆದರೆ ಕೆಜಿಎಫ್ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ.