Dipika – Shoaib : ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ಸ್ಟಾರ್ ಜೋಡಿ..!!
ಹಿಂದಿಯ ಖ್ಯಾತ ಧಾರಾವಾಹಿ ನಟರಾದ ದೀಪಿಕಾ ಕಕ್ಕರ್ ಹಾಗೂ ಶೋಯೆಬ್ ಇಬ್ರಾಹಿಂ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ..
ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದು , ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ದೀಪಿಕಾ ಕಕ್ಕರ್ ಸಸುರಾಲ್ ಸಿಮರ್ ಕಾ ಎಂಬ ಖ್ಯಾತ ಧಾರಾವಾಹಿಯ ಮೂಲಕ ಸಿಮ್ರನ್ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದರು.. ಇದೇ ಧಾರಾವಾಹಿಯಲ್ಲೇ ಪ್ರೇಮ್ ಆಗಿ ಪ್ರಮುಖ ಪಾತ್ರದಲ್ಲಿ ಶೋಯೆಬ್ ಮಿಂಚಿದ್ದರು..
ಇದೇ ಧಾರವಾಹಿಯ ಶೂಟಿಂಗ್ ಸೆಟ್ ನಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.. ನಂತರ ಈ ಜೋಡಿ ವಿವಾಹವಾಗಿದ್ದರು.. 2018 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು..
ಕಳೆದ ವರ್ಷ ದೀಪಿಕಾ ಅವರಿಗೆ ಗರ್ಭವಾತವಾಗಿತ್ತು..
ಅಂದ್ಹಾಗೆ ದೀಪಿಕಾ ಹಿಂದಿಯ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಸಹ ಆಗಿದ್ದರು.. ದೀಪಿಕಾ ಮತ್ತು ಶೋಯೆಬ್ ಇಬ್ರಾಹಿಂ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ.
Deepika – Shoyeb expecting there First Child