Samantha : ಸಮಂತಾ ಮುಂಬೈಗೆ ಶಿಫ್ಟ್ – ದುಬಾರಿ ಮನೆಯಲ್ಲಿ ವಾಸ..!!!
ಪತಿ , ನಟ ನಾಗಚೈತನ್ಯ ಜೊತೆಗೆ ಬಹುಭಾಷಾ ನಟಿ ಸಮಂತಾ ಅವರು ಡಿವೋರ್ಸ್ ಪಡೆದ ನಂತರ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು..
ಆದ್ರೆ ಹಲವಾರು ದಿನಗಳಿಂದ ಸಮಂತಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ..
ಅದಾಗ್ಯೂ ಅವರು ಯಶೋಧ , ಶಾಕುಂತಲಂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದುಂಟು..
ಸದ್ಯ ಸ್ಯಾಮ್ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಇದೀಗ ಬಹುತೇಕ ಚೇತರಿಸಿಕೊಳ್ತಿದ್ದು, ಮತ್ತೆ ವರ್ಕೌಟ್ ಕೂಡ ಪ್ರಾರಂಭಿಸಿದ್ದಾರೆ.. ಸ್ವಲ್ಪ ದಿನ ಸಿನಿಮಾ ರಂಗದಿಂದ ದೂರವಿದ್ದ ಸಮಂತಾ, ಇದೀಗ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಜೊತೆಗೆ ವೆಬ್ ಸೀರಿಸ್ ಒಂದಕ್ಕೆ ಸಹಿ ಮಾಡಿದ್ದಾರೆ..
ಅಲ್ಲದೇ ತಮ್ಮ ಎರಡನೇ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾದ ಶೂಟಿಂಗ್ ಗಾಗಿ ಹೆಚ್ಚು ದಿನಗಳ ಕಾಲ ಮುಂಬೈನಲ್ಲಿ ಇರಬೇಕಾದ ಪರಿಸ್ಥಿತಿ ಇದ್ದು , ಹೈದ್ರಾಬಾದ್ ತೊರೆದು ಮುಂಬೈ ಶಿಫ್ಟ್ ಆಗ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ..
ಇನ್ಮುಂದೆ ಅವರು ಮುಂಬೈನಲ್ಲಿ ನೆಲೆಸಲಿದ್ದಾರೆ. ಅದಕ್ಕಾಗಿ ಸಮಂತಾ ದುಬಾರಿಯ ಬೆಲೆಯ ಫ್ಲ್ಯಾಟ್ ಖರೀದಿ ಮಾಡಿದ್ದು, ಅದಕ್ಕೆ 15 ಕೋಟಿ ರೂಪಾಯಿ ನೀಡಿದ್ದಾರೆ. ಅದು ಮೂರು ಬೆಡ್ ರೂಮ್ ವುಳ್ಳ ಮನೆಯಾಗಿದೆ ಎಂದು ವರದಿ ಆಗಿದೆ.
ಈ ಸಿನಿಮಾಗೆ ವರುಣ್ ಧವನ್ ನಾಯಕ ಎನ್ನಲಾಗ್ತಿದೆ..
Samantha shifts to mubai , leaves hydrabad