Saptami Gowda : ಕಾಂತಾರ ‘ಲೀಲಾ’ ಸಪ್ತಮಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ..!!
ಕಾಂತಾರ ಚಿತ್ರ ದೇಶಾದ್ಯಂತ ಹಿಟ್ ಆದ ಬಳಿಕ ಈ ಚಿತ್ರದಲ್ಲಿ ನಟಿಸಿದ್ದ ಪಾತ್ರಗಳು ಸಹ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿಕೊಂಡಿವೆ. ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ಸಪ್ತಮಿ ಗೌಡ ಕೂಡ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಅವಕಾಶಗಳನ್ನ ಗಿಟ್ಟಿಸಿಕೊಂಡಿದ್ದು ಬಾಲಿವುಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯ ಸಪ್ತಮಿ ಬಾಲಿವುಡ್ ಹೆಸರಾಂತ ನಿರ್ದೇಶಕ, ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿ ವ್ಯಾಕ್ಸಿನ್ ವಾರ್ ಹೆಸರಿನ ಸಿನಿಮಾದ ಶೂಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ. ಇದಲ್ಲದೇ ಕನ್ನಡದಲ್ಲಿ ಮುಂಗಾರು ಮಳೆ ಕೃಷ್ಣ ನಿರ್ದೇಶನ ಅಭಿಷೇಕ್ ಅಂಬರೀಷ್ ನಾಯಕರಾಗಿರುವ ಕಾಳಿ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೇ ಪರಭಾಷೆಗಳಿಂದ ಸಿನಿಮಾ ಆಫರ್ ಗಳು ಬಂದಿದ್ದು, ಪಾತ್ರದ ಮಹತ್ವವನ್ನ ಅಳೆದು ತೂಗಿ ಚಿತ್ರವನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ನಟಿ ಸಪ್ತಮಿ ಹೊಸ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಪೋಟೋ ಶೂಟ್ ನಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.
Saptami Gowda , kantara’s fame saptami’s new look