Kangana Ranouth : ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ ಎಂದ ಕಂಗನಾ..!!
ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿಯರಲ್ಲಿ ಬಾಲಿವುಡ್ ನಟಿಯರಲ್ಲಿ ಕಂಗಾನ ರಣಾವತ್ ಕೂಡ ಒಬ್ಬರು. ಕಂಗಾನ ಸಧ್ಯಕ್ಕೆ ಎಮರ್ಜೆನ್ಸಿ ಚಿತ್ರದಲ್ಲಿ ಬ್ಯುಸಿಯಾಗಿರೋ ನಟಿ ಮತ್ತೊಂದು ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ..
ಈ ಹಿಂದೆ ಬಾಲಿವುಡ್ ನಲ್ಲಿ ಸೆನ್ಷೇಷನ್ ಸೃಷ್ಟಿಸಿದ್ದು ಕಂಗನಾ ಹೃತಿಕ್ ಗಾಢವಾದ ಸ್ನೇಹದ ವಿಚಾರ.. ನಂತರ ಈ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದೇ ಹೇಳಕಲಾಗಿತ್ತು..
ಕಂಗನಾ ಹೃತಿಕ್ ರೋಷನ್ ಆರೋಪ , ಪ್ರತ್ಯಾರೋಪಗಳನ್ನೂ ಮಾಡಿಕೊಂಡು ಸುದ್ದಿಯಲ್ಲಿದ್ದರು..
ಇದೀಗ ಬಹಳ ದಿನಗಳ ನಂತರ ಕಂಗನಾ ಮತ್ತೆ ಹೃತಿಕ್ ಬಗ್ಗೆ ಮಾತನಾಡಿದ್ದಾರೆ..
ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ತಮ್ಮದ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ..
ನಿಮಗೆ ಹೃತಿಕ್ ರೋಷನ್ ಮತ್ತು ದಿಲ್ಜಿತ್ ದೋಸಾಂಜ್ ಇವರಿಬ್ಬರಲ್ಲಿ ಯಾರು ಇಷ್ಟ, ಯಾರು ಉತ್ತಮ ನಟ ಎಂದು ಪ್ರಶ್ನೆ ಮಾಡಪಲಾಗಿತ್ತು..
ಅದಕ್ಕೆ ಉತ್ತರ ನೀಡಿರುವ ನಟಿ ಒಬ್ಬರೇ ಕೇವಲ ಆ್ಯಕ್ಷನ್ ಮಾಡ್ತಾರೆ, ಮತ್ತೊಬ್ಬರು ವಿಡಿಯೋ ಸಾಂಗ್ ನಲ್ಲೇ ಕಳೆದು ಹೋಗಿದ್ದಾರೆ. ಇವರಲ್ಲಿ ಒಬ್ಬರು ನಟಿಸಿರೋದನ್ನ ನಾನು ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ ಎಂದು ಪರೋಕ್ಷವಾಗಿ ಹೃತಿಕ್ ಗೆ ಟಾಂಗ್ ಕೊಟ್ಟಿದ್ದಾರೆ…