Pathaan : 1000 ಕೋಟಿ ಕ್ಲಬ್ ಸೇರಿದ ಪಠಾಣ್ – ಈ ರೆಕಾರ್ಡ್ ಬರೆದ ಉಳಿದ ಸಿನಿಮಾಗಳ ಲಿಸ್ಟ್ ಇಲ್ಲಿದೆ..!!
ಬಾಲಿವುಡ್ ನಲ್ಲಿ ವರ್ಷಗಳೇ ಬೇಕಾಯ್ತು ಒಂದು ಸಿನಿಮಾ ಸರಿಯಾಗಿ ಸೌಂಡ್ ಮಾಡೋದಕ್ಕೆ..
ಆ ರೀತಿ ಸೌಂಡ್ ಮಾಡ್ತಿರುವ ಸಿನಿಮಾವೇ ಶಾರುಖ್ ಖಾನ್ ನಟನೆಯ ‘ ಪಠಾಣ್ ‘ ಸಿನಿಮಾ…
ರಿಪೋರ್ಟ್ಗಳು ತೋರಿಸುತ್ತಿರುವಂತೆ ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಸಿನಿಮಾ ಹವಾ ಜೋರಾಗಿದೆಯಾದ್ರೂ , ಕೆಲವರು ಈ ರಿಪೋರ್ಟ್ ಫೇಕ್ ಎಂದು ಆರೋಪಿಸಿದ್ದೂ ಉಂಟು..
ಇದೆಲ್ಲದರ ನಡುವೆಯೇ ‘ಪಠಾಣ್’ ಹೊಸ ರೆಕಾರ್ಡ್ ಬರೆದಿದೆ..
‘ಪಠಾಣ್’ ಸಿನಿಮಾ ಇದೀಗ 1000 ಕೋಟಿ ಕ್ಲಬ್ ಸೇರಿದೆ..
ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ ಕ್ಲಬ್ ಸೇರಿದ್ದು ಹೊಸ ದಾಖಲೆ ಬರೆದಿದೆ.. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರವೂ ಇದಾಗಿದೆ..
ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ “ಪಠಾನ್” ಬಿಗ್ ಸ್ಕ್ರೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪಠಾಣ್ ಬಿಡುಗಡೆಗೂ ಮುನ್ನ ಚಿತ್ರದ ಬೇಷಾರಾಂ ರಂಗ್ ಹಾಡು ವಿವಾದಕ್ಕೆ ಕಾರಣವಾಗಿತ್ತು. ಸಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಬಾಯ್ ಕಟ್ ಟ್ರೆಂಡ್ ಕೇಳಿ ಬಂದಿತ್ತು. ಚಿತ್ರದ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಹಲವಡೆ ವಿವಾದ ಸೃಷ್ಟಿಯಾಗಿತ್ತು. ಇದೀಗ ಚಿತ್ರ ಎಲ್ಲಾ ಅಡೆತಡೆಗಳನ್ನ ಎದುರಿಸಿ ಗೆದ್ದು ಬಂದಿದೆ.
ಮತ್ತೊಂದೆಡೆ ಹಿಂದಿ ವರ್ಷನ್ ನ ಲೆಕ್ಕಾಚಾರ ಮಾತ್ರ ತೆಗೆದುಕೊಂಡರೆ ಬಾಹುಬಲಿ 2 ಸಿನಿಮಾ ಒಟ್ಟಾರೆಯಾಗಿ 510. 99 ಕೋಟಿ ಕಲೆಕ್ಷನ್ ಮಾಡಿದೆ..
ಪಠಾಣ್ ಈ ವರೆಗೂ 499 ಕೋಟಿ ಕಲೆಕ್ಷನ್ ಮಾಡಿದೆ. ಹೀಗಾಗಿ ಬಾಹುಬಲಿ 2 ರೆಕಾರ್ಡ್ ಬ್ರೇಕ್ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..
ಬಾಹುಬಲಿ , ಬಾಹುಬಲಿ 2 1747 ಕೋಟಿ , ದಂಗಲ್ 1968.03 ಕೋಟಿ, ಕೆಜಿಎಫ್ 2 1,250 ಕೋಟಿ, RRR 1,188 ಕೋಟಿ ನಂತರ 1000 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಪಠಾಣ್ ಆಗಿದೆ..
Pathaan joins 1000 crores club – cinibazaar