Prasar Bharti OTT : ಕೇಂದ್ರ ಸರ್ಕಾರದಿಂದ OTT ಪ್ಲಾಟ್ ಫಾರ್ಮ್…!!!
ವೇಗವಾಗಿ ಬದಲಾಗುತ್ತಿರುವ ಪ್ರಸಾರ ಉದ್ಯಮದಲ್ಲಿ ತನ್ನ ಹೆಜ್ಜೆ ಗುರುತನ್ನ ಹೆಚ್ಚಿಸಲು ಕೇಂದ್ರ ಸರ್ಕಾರವೇ OTT ಪ್ಲಾಟ್ ಫಾರ್ಮ್ ನ್ನ ಬಿಡುಗಡೆ ಮಾಡುತ್ತಿದೆ. ಪ್ರಸಾರ ಭಾರತಿಗೆ ಓವರ್-ದಿ-ಟಾಪ್ (OTT) ವೇದಿಕೆಯನ್ನ ಪ್ರಾರಂಭಿಸಲು ಸರ್ಕಾರ ಒತ್ತು ನೀಡಿದೆ.
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಸೊಸೈಟಿ ಎಕ್ಸ್ಪೋದಲ್ಲಿ OTT ಪ್ಲಾಟ್ಫಾರ್ಮ್ಗಳ ಕುರಿತು ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ, “ನಾವು ಪ್ರಸಾರ ಭಾರತಿಗೆ OTT ಪ್ಲಾಟ್ ಫಾರ್ಮ್ ತರಲು ಯೋಚಿಸುತ್ತಿದ್ದೇವೆ, 2023 – 24 ರಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ವರ್ಷ ಸರ್ಕಾರವು ನೇರ-ಮೊಬೈಲ್ ದೂರದರ್ಶನ ಪ್ರಸಾರದ ಪ್ರಯೋಗಗಳನ್ನು ನಡೆಸಲಿದೆ ಎಂದು ಅವರು ಹೇಳಿದರು. ಎಡಪಂಥೀಯ ಉಗ್ರವಾದ, ಗಡಿ ಮತ್ತು ಆಯಕಟ್ಟಿನ ಪ್ರದೇಶಗಳನ್ನ ತಲುಪಲು ಸರ್ಕಾರವು ಪ್ರಯತ್ನಗಳನ್ನು ಮಾಡಿದೆ ಎಂದು ಶ್ರೀ ಚಂದ್ರ ಹೇಳಿದರು.
ಮುಂಬರುವ ಆರ್ಥಿಕ ವರ್ಷಕ್ಕೆ ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲಿ ವೀಕ್ಷಕರನ್ನು ವಿಸ್ತರಿಸಲು 600 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. “ದೂರದರ್ಶನದ ವೀಕ್ಷಕರ ಸಂಖ್ಯೆಯು ಕ್ಷೀಣಿಸುತ್ತಿದೆ. ಮತ್ತು ವೀಕ್ಷಕರ ಸಂಖ್ಯೆಯನ್ನ ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಸೇರಿದಂತೆ ಪ್ರಸಾರ ಭಾರತಿಯ ಮೂಲಸೌಕರ್ಯವನ್ನು ಸುಧಾರಿಸಲು ಗಮನಹರಿಸಲಾಗಿದೆ ಎಂದು ಶ್ರೀ ಚಂದ್ರ ಹೇಳಿದ್ದಾರೆ.
Prasar Bharti OTT will be released by central government