Rakhi Sawanth : ‘ನಾನು ಫ್ರಿಡ್ಜ್ ನಲ್ಲಿ ಹೆಣವಾಗಲಿಲ್ಲ’ – ರಾಖಿ
ಬಾಲಿವುಡ್ ನ ನೌಟಂಕಿ ಕ್ವೀನ್ ರಾಖಿ ಸಾವಂತ್ ಆಗಾಗ ಬಾಯ್ ಫ್ರೆಂಡ್ , ಮದ್ವೆ ವಿಚಾರಗಳಿಮದಲೇ ಸುದ್ದಿಯಾಗೋದು ಗೊತ್ತಿರೋ ವಿಚಾರವೇ..
ಕೆಲವೇ ದಿನಗಳ ಹಿಂದೆ ಮೈಸೂರಿನ ಹುಡುಗ ಆದಿಲ್ ಜೊತೆಗೆ ಮದುವೆಯಾಗಿದ್ದ ರಾಖಿ ಆ ಬಳಿಕವೇ ಆತನ ವಿರುದ್ಧ ವಂಚನೆ , ವರದಕ್ಷಿಣೆ ಕಿರುಕುಳ ಸೇರಿ ನಾನಾ ಆರೋಪಗಳನ್ನ ಹೊರಿಸಿ ಜೈಲಿಗಟ್ಟಿದ್ದು , ರಸ್ತೆಗಳಲ್ಲಿ ಕಣ್ಣೀರು ಸುರಿಸುತ್ತಾ ಇದ್ದಾರೆ..
ಅಲ್ಲದೇ ಪತಿ ಆದಿಲ್ ಗೆ ಬೇರೆ ಅವರ ಜೊತೆಗೆ ಸಂಬಂಧವಿದೆ.. ತನು ಎಂಬಾಕೆಗಾಗಿ ನನಗೆ ಮೋಸ ಮಾಡ್ತಿದ್ದಾನೆ.. ನನ್ನ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಮಾರಾಟ ಮಾಡಿದ್ದಾನೆ ಎಂದೆಲ್ಲಾ ಆರೋಪಗಳನ್ನ ಮಾಡಿದ್ದರು…
ಇದೀಗ ” ನನಗೆ ಈಗ ಅನಿಸುತ್ತಿದೆ. ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದೆ ಎಂದು. ಅವನ ಉದ್ದೇಶವು ನನ್ನನ್ನು ಫ್ರಿಡ್ಜ್ ನಲ್ಲಿ ಹೆಣವಾಗಿ ತುಂಬುವುದು ಆಗಿತ್ತಾ..?? ”
“ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದಿದ್ದಾರೆ”..
ಅಲ್ಲದೇ ಆದಿಲ್ ಜೊತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿರುವ ರಾಖಿ ಸಾವಂತ್
ಮೊದ ಮೊದಲು ನಮ್ಮದು ಪವಿತ್ರ ಪ್ರೇಮ ಎಂದುಕೊಂಡಿದ್ದೆ. ಅವನನ್ನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದ. ಆಮೇಲೆ ಅವನ ಮತ್ತೊಂದು ಮುಖ ಪರಿಚಯ ಆಯಿತು. ಅವನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ. ಅವನು ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
Rakhi Sawanth says god is great , my dead body was not found in fridge